ಧಾರವಾಡದ ಕನ್ನಡ ಚಲನ ಚಿತ್ರರಂಗದ ನಿರ್ದೇಶಕರಾದ ಡಾಕ್ಟರ್!! ಅರವಿಂದ್ ಮುಳಗುಂದ ಅವರು: “ಸರಸ್ವತಿ ಸಾಧಕ ಸಿರಿ” ರಾಷ್ಟ್ರ ಪ್ರಶಸ್ತಿಗೆ ಆಯ್ಕೆ.


ಧಾರವಾಡ: ಎ17. ಕನ್ನಡ ಚಲನ ಚಿತ್ರರಂಗದಲ್ಲಿ ಮೂರು ದಶಕಗಳ ಸೇವೆಯನ್ನೂ, ಹಲವಾರು ಚಲನ ಚಿತ್ರಗಳಲ್ಲಿ ಯಶಸ್ಸನ್ನು ಕಾಣಿಸಿದ ಧಾರವಾಡ ನಗರದ
ಡಾಕ್ಟರ್ !! ಶ್ರೀ ಅರವಿಂದ್ ಮುಳಗುಂದ ಅವರು "ಸರಸ್ವತಿ ಸಾಧಕ ಸಿರಿ" ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಚಲನ ಚಿತ್ರರಂಗದಲ್ಲಿ ಇವರು ನಿರ್ದೇಶಕರಾಗಿ ಸಾಹಸಸಿಂಹ ವಿಷ್ಣುವರ್ಧನ್, ಡಾಕ್ಟರ್ ಅಂಬರೀಷ್, ದೇವರಾಜ್, ಶ್ರುತಿ, ಸುಧಾರಾಣಿ ಮತ್ತಿತರ ಗಣ್ಯ ನಟ ನಟಿಯರೊಂದಿಗೆ ಕೆಲಸ ಮಾಡಿದ್ದು, “ಮಹಾಮಹಿಮ ಲಡ್ಡು ಮುತ್ತ್ಯಾ”, “ಅಮರೇಶ್ವರ ಮಹಾತ್ಮೆ” ಸೇರಿದಂತೆ ಹಲವಾರು ಚಿತ್ರಗಳಿಗೆ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
“ಶ್ರೀಗಂಧ”, “ಅಮ್ಮು ಯು ಆರ್ ಗ್ರೇಟ್”, “ಬಯಸದೆ ಬಂದ ರಾಜಯೋಗ”, “ಅನುಗ್ರಹ ಆಂಜನೇಯ” ಎಂಬ ಕಿರುಚಿತ್ರಗಳ ಮೂಲಕವೂ ತಮ್ಮ ವಿಶಿಷ್ಟ ಛಾಪು ಮೂಡಿಸಿದ್ದಾರೆ. 


ಇವರ ಕಲೆ, ಸಾಹಿತ್ಯ, ಶಿಕ್ಷಣ, ರಂಗಭೂಮಿ, 
ಕನ್ನಡ ಚಲನ ಚಿತ್ರರಂಗ ಸಾಂಸ್ಕೃತಿ ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ್ದಾರೆ ಇವರ ಕಾಯಕ ಮೆಚ್ಚಿ ಸಂಘಟನೆಗಳು “ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್ 
ಗೌರವ ಡಾಕ್ಟರೇಟ್ ಇನ್ನೂ ಹಲವಾರು 
ಜಿಲ್ಲಾ, ರಾಜ್ಯ, ರಾಷ್ಟ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.

ಅರವಿಂದ್ ಅವರ ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಾಂಸ್ಕೃತಿಕ ಸೇವೆಗಳಲ್ಲಿ
ಸಾಕಷ್ಟು ಸೇವೆ ನೀಡಿದ್ದಾರೆ ಇವರ ಸಾಧನೆ ಗುರುತಿಸಿ
ಸರಸ್ವತಿ ಸಾಧಕ ಸಿರಿ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಇವರಿಗೆ “ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ”, ಏಪ್ರಿಲ್ 27, 2025 ರಂದು ದಾವಣಗೆರೆ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ  ವಿಜೃಂಭಣೆಯಿಂದ ನಡೆಯುವ ರಾಜ್ಯಮಟ್ಟದ ಸಾಂಸ್ಕೃತಿಕ ಸಮಾರಂಭದಲ್ಲಿ “ಸರಸ್ವತಿ ಸಾಧಕ ಸಿರಿ” ರಾಷ್ಟ್ರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಸಂಸ್ಥಾಪಕರಾದ ಶ್ರೀ ಸಾಲಿಗ್ರಾಮ ಗಣೇಶ ಶೆಣೈ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ