ಅಪರಿಚಿತರು


ಟಂ ಟಂ ಆಟೋ ಬಂತು ನೋಡಿರಿ
ಸೀಟು ಆಯ್ದು ಕುಳಿತು ಕೊಳ್ಳಿರಿ
ಹೆಂಗಳೆಯರು ಪಯಣಿಸುತಿಹರು
ಒಬ್ಬರಿಗೊಬ್ಬರು ಅಪರಿಚಿತರು...

ಮಾತಿಲ್ಲ,ಕಥೆಯಿಲ್ಲ ನಗುವಿಲ್ಲ
ಸುತ್ತಲೂ ಮೌನ ಆವರಿಸಿದೆಯಲ್ಲ
ಏನೋ ಚಿಂತೆಯಲ್ಲಿ ಮುಳುಗಿಹರು
ತಮ್ಮ ತಮ್ಮನಿಲ್ದಾಣದ ದಾರಿಕಾದಿಹರು...

ಬಾಳ್ವೆಯ ನೂರಾರು ಯೋಚನೆ
ನಾನಿಲ್ಲದೇ ಹೇಗಿದೆಯೋ ಮನೆ
ಕೆಲಸಕ್ಕೆ ಹೋಗಬೇಕು ಊರೂರಿಗೆ
ಏನೇನು ಮಾಡಬೇಕು ನಾಳೆಗೆ...

ಎಲ್ಲರದೂ ಒಂದೊಂದು ತರ
ಸುರಿಸಿಹರು ಹಗಲಿರುಳು ಬೆವರ
ನಿಲ್ಲದೇ ಓಡಿಸಿಹರು ಸಂಸಾರದ ತೇರ
ಮನದಲ್ಲೇ ನೆನೆದಿಹರು ದೇವರ...

ಹೊತ್ತು ಮುಳುಗಿತು ಮನೆ ಸೇರಬೇಕು 
ಅಡುಗೆ ಇತ್ಯಾದಿ ಅಣಿ ಗೊಳಿಸಬೇಕು
ಹೆಣ್ಣು ಮನೆಯ ನಂದಾದೀಪದಂತೆ
ಹೆಣ್ಣಿಲ್ಲದ ಮನೆ ಮಸಣದಂತೆ...


*ಗೀತಾ ಪೂಜಾರ*
    *ಹಾವೇರಿ*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ