ಹಸಿರೇ ಉಸಿರು



ಕೇಳಿರಿ ಮಕ್ಕಳೇ
ನಾಡಿನ ಪ್ರಜೆಗಳೇ
ಕೇಳಿರಿ ಹೇಳುವೆ ವಿಂದು
ಪರಿಸರ ಹೊಗಳುವ ಜನಿ ಜನಿತವಿಂದು

ಓ ನನ್ನ ಪರಿಸರ
ಹಸಿರಿನಿಂದ ಕಾಣುತ್ತಿವೆ ಎಲ್ಲ ಮರ
 ಮೈದುಂಬಿ ಅಬ್ಬಸುವ ಸಾಗರ
ಯಾರು ಇದನ್ನು ಸೃಷ್ಟಿಸಿದ ಮಾಯಗಾರ

ಗಿಡದ ಮೇಲೊಂದು ಹಕ್ಕಿಯ ಗಾನ
ನೆಲದ ಮಡಿಲಲ್ಲಿ ಹಸಿರು ತಾನ 
ಜೂನ್ ಐದರ ಈ ದಿನವು
ಪರಿಸರಕ್ಷೆಗೊಂದು ಪಣವು

ಒಂದು ಗಿಡವ ನಾ ನಾಡುವೆ ಇಂದು
ಮರದ ನೆರಳಿನಲ್ಲಿ ಸುಖವಿದೆ ಮುಂದು
ನದಿಗಳ ನೀರನ್ನು ಮಲಿನ ಮಾಡದೆ
ಜೀವ ಸಂಕುಲವ  ಕಾಯುತಿ ಹಿಂದೆ ಬೀಳದೆ

ಪ್ಲಾಸ್ಟಿಕ್ ಎಂಬ ಭೂತವ ಓಡಿಸೋಣ
ನಮ್ಮ ಭೂಮಿಯನ್ನು ಸ್ವಚ್ಛಗೊಳಿಸೋಣ
ಕಾಡನ್ನು ಉಳಿಸಿ ನಾಡನ್ನು ಬೆಳೆಸಿ
ಹಸಿರನ್ನು ನೀಡುವ ಪ್ರಕೃತಿಯ ಹರಿಸಿ

ಬನ್ನಿ ಕೈಜೋಡಿಸೋಣ ಎಲ್ಲರೂ ಸೇರಿ
ಪರಿಸರ ಉಳಿಸುವ ಹಾದಿಯ ಏರಿ
ಇಂದಿನ ಹಸಿರೇ ನಾಡಿನ ಉಸಿರು
ಇದೇ ನಮ್ಮ ಬದುಕಿನ ಹಸಿರು

✍🏻ಕುಮಾರಿ ಪ್ರತೀಕ್ಷಾ ಬಸವರಾಜ‌ ಹುದ್ದಾರ

ಹನಿಗವನಗಳು.



ಕಿಕ್‌ಔಟ್ ಪ(ಮ)ದ್ಯ..ಗಳು.
ಕುಡಿದು ಹೋದರೆ
ಮಡದಿ ಕದ ತೆಗೆಯುವುದಿಲ್ಲ
ಅದಕ್ಕೆ ನಾನು ರಾತ್ರಿ ಕುಡಿಯುವುದಿಲ್ಲ
ಹಗಲು ಹೇಳುವುದಿಲ್ಲ. 

ನಮ್ಮೂರ ಅಡಿಗೆ ಭಟ್ಟರು
ಸಂಜೆ ವಯಸ್ಸಿನಲ್ಲಿ ಮದುವೆಯಾದರು
ಸಪ್ಪೆ ಜೀವನದ ಸಾರು
ಉಪ್ಪು ಬೇಕಾಗಿತ್ತು ಮಾರೆಯರೇ
ಅದಕ್ಕೆ ಇರುಳುಗಣ್ಣಿನ ಹುಡುಗಿ 
ಮದುವೆಯಾದೆ ಎಂದರು 

3. ನಮ್ಮೂರಿನ ಬಾಲು
ಕುಡಿದಾಗ ಆಲ್ಕೋಹಾಲು
ಬಿಡುತ್ತಾನೆ ಅಹಾ ಎಂತಹ ರೈಲು ಶಿವ
ಏನು ಮಾಡಲಿ ಅವನೀಗ ರೈಲು ಸಚಿವ

ರಾಜಕೀಯದಾಟದಲ್ಲಿ
ಚುನಾವಣೆಯೇ ಮೈದಾನ
ರಾಜಕಾರಣಿಯೇ ಆಟದ ಚೆಂಡು
ಸೋಲು ಗೆಲುವಿನ ಸರದಾರರು
ಕಿಕ್‌ಔಟ್ ಮತದಾರರು     

ಗೊರೂರು ಅನಂತರಾಜು, ಹಾಸನ.

ಅಭಿಮಾನಿಗಳ ಹೃದಯಸಾಮ್ರಾಟ್: ವರನಟ ಡಾ. ರಾಜಕುಮಾರ ಅವರ ಸಂಪೂರ್ಣ ಜೀವನಗಾಥೆ”!!ಪ್ರಸ್ತಾವನೆ


- ಕೆ ಆರ್ ಸುಮತೀಂದ್ರ

ಕರ್ನಾಟಕದ ಸಂಸ್ಕೃತಿ, ಕಲೆ ಮತ್ತು ಭಾಷೆಯ ಗೌರವವನ್ನು ವಿಶ್ವದ ಮಟ್ಟಿಗೆ ಎತ್ತಿದ ಮಹಾನ್ ವ್ಯಕ್ತಿತ್ವಗಳಲ್ಲಿ ಡಾ. ರಾಜಕುಮಾರ ಪ್ರಮುಖರು. ಅವರು ಕೇವಲ ಚಲನಚಿತ್ರ ನಟರಲ್ಲ, ಕನ್ನಡಿಗರ ಆತ್ಮಗೌರವದ ಪ್ರತೀಕ. ಅವರ ಜೀವನವು ಶ್ರಮ, ಶಿಸ್ತು, ವಿನಯ ಮತ್ತು ಮೌಲ್ಯಗಳ ಪ್ರತಿಬಿಂಬವಾಗಿದೆ.!!!
ಬಾಲ್ಯ ಮತ್ತು ಕುಟುಂಬ ಹಿನ್ನೆಲೆ ಡಾ. ರಾಜಕುಮಾರ ಅವರ ಮೂಲ ಹೆಸರು ಸಿಂಗನಲ್ಲೂರು ಪುತ್ತಸ್ವಾಮಯ್ಯ ಮುತ್ತುರಾಜು. ಅವರು 1929ರ ಏಪ್ರಿಲ್ 24ರಂದು ಗಜಾನೂರಿನಲ್ಲಿ ಜನಿಸಿದರು. ಅವರ ತಂದೆ ಪುತ್ತಸ್ವಾಮಯ್ಯರು ಪ್ರಸಿದ್ಧ ನಾಟಕ ಕಲಾವಿದರು. ಬಾಲ್ಯದಲ್ಲೇ ನಾಟಕಗಳ ವಾತಾವರಣದಲ್ಲಿ ಬೆಳೆದ ಮುತ್ತುರಾಜು ಅವರು ಕಲೆಯ ಕಡೆ ಹೆಚ್ಚು ಆಕರ್ಷಿತರಾದರು.!!!
ನಾಟಕದಿಂದ ಸಿನಿರಂಗದವರೆಗೆ ಚಿಕ್ಕ ವಯಸ್ಸಿನಲ್ಲಿ ಗುಬ್ಬಿ ವೀರಣ್ಣ ನಾಟಕ ಕಂಪನಿಗೆ ಸೇರಿ ನಟನಾ ಕೌಶಲ್ಯವನ್ನು ಬೆಳೆಸಿದರು. ಹಲವು ವರ್ಷಗಳ ನಾಟಕ ಅನುಭವದ ನಂತರ 1954ರಲ್ಲಿ “ಬೇಡರ ಕಣ್ಣಪ್ಪ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಈ ಚಿತ್ರವೇ ಅವರಿಗೆ ಭಾರಿ ಯಶಸ್ಸನ್ನು ತಂದುಕೊಟ್ಟಿತು.!!!

ಚಿತ್ರರಂಗದಲ್ಲಿ ಉನ್ನತಿ! ಡಾ. ರಾಜಕುಮಾರ ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಪ್ರೇಮಕಥೆ, ಭಾವನಾತ್ಮಕ ಎಲ್ಲ ರೀತಿಯ ಪಾತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದರು. ಅವರ ಅಭಿನಯದಲ್ಲಿ ನೈಜತೆ ಮತ್ತು ಸರಳತೆ ವಿಶೇಷವಾಗಿತ್ತು.!! 
ಗಾಯಕನಾಗಿ ಸಾಧನೆ ಅವರು ಉತ್ತಮ ಗಾಯಕರೂ ಆಗಿದ್ದರು. ಭಕ್ತಿಗೀತೆಗಳು, ಜನಪದ ಹಾಡುಗಳು ಮತ್ತು ಚಲನಚಿತ್ರ ಹಾಡುಗಳಲ್ಲಿ ತಮ್ಮ ಮಧುರ ಸ್ವರದಿಂದ ಜನಮನ ಗೆದ್ದರು. “ನಾದಮಯ ಈ ಲೋಕವೆಲ್ಲಾ” ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದರು.!! ವ್ಯಕ್ತಿತ್ವ ಮತ್ತು ಜೀವನ ಮೌಲ್ಯಗಳು ಡಾ. ರಾಜಕುಮಾರ ಅವರು ಸರಳತೆ ಮತ್ತು ಶಿಸ್ತಿನ ಪ್ರತೀಕ. ಯಾವುದೇ ವಿವಾದಗಳಿಗೆ ಒಳಗಾಗದೆ, ತಮ್ಮ ವೈಯಕ್ತಿಕ ಜೀವನವನ್ನು ಮೌಲ್ಯಯುತವಾಗಿ ನಡೆಸಿದರು. ಅವರು ಮದ್ಯಪಾನ, ಧೂಮಪಾನದಿಂದ ದೂರವಿದ್ದರು ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಿದರು.!!

ಕನ್ನಡಾಭಿಮಾನ ಮತ್ತು ಸಮಾಜ ಸೇವೆ!! ಅವರು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅಪಾರ ಪ್ರೀತಿ ಹೊಂದಿದ್ದರು. ಗೋಕಾಕ್ ಚಳುವಳಿಗೆ ಬೆಂಬಲ ನೀಡಿ ಕನ್ನಡ ಭಾಷೆಯ ಮಹತ್ವವನ್ನು ಉತ್ತೇಜಿಸಿದರು. ಅವರ ಈ ಕಾರ್ಯಗಳು ಕನ್ನಡಿಗರ ಮನದಲ್ಲಿ ಗೌರವವನ್ನು ಹೆಚ್ಚಿಸಿತು!!

ಪ್ರಶಸ್ತಿಗಳು ಮತ್ತು ಗೌರವಗಳು ಡಾ. ರಾಜಕುಮಾರ ಅವರಿಗೆ ಅನೇಕ ಪ್ರಶಸ್ತಿಗಳು ಲಭಿಸಿವೆ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪದ್ಮಭೂಷಣ 2000ರಲ್ಲಿ ಕಾಡು ಕಳ್ಳ ವೀರಪ್ಪನ್ ಅವರು ಡಾ. ರಾಜಕುಮಾರರನ್ನು ಅಪಹರಿಸಿದರು. ಈ ಘಟನೆ ರಾಜ್ಯದಾದ್ಯಂತ ಆತಂಕ ಉಂಟುಮಾಡಿತು. ಹಲವಾರು ದಿನಗಳ ನಂತರ ಅವರು ಸುರಕ್ಷಿತವಾಗಿ ಬಿಡುಗಡೆಗೊಂಡರು.!! 2006ರ ಏಪ್ರಿಲ್ 12ರಂದು ಡಾ. ರಾಜಕುಮಾರ ಅವರು ನಿಧನರಾದರು. ಅವರ ನಿಧನವು ಕನ್ನಡನಾಡಿಗೆ ದೊಡ್ಡ ನಷ್ಟವಾಯಿತು. ಲಕ್ಷಾಂತರ ಅಭಿಮಾನಿಗಳು ದುಃಖ ವ್ಯಕ್ತಪಡಿಸಿದರು.!!!
ಡಾ. ರಾಜಕುಮಾರ ಅವರು ಕೇವಲ ನಟರಲ್ಲ, ಅವರು ಒಂದು ಸಂಸ್ಕೃತಿ. ಅವರ ಜೀವನವು ಮುಂದಿನ ಪೀಳಿಗೆಗಳಿಗೆ ಆದರ್ಶವಾಗಿದೆ. ಅವರ ಸಿನಿಮಾಗಳು ಮತ್ತು ಹಾಡುಗಳು ಸದಾ ಜನಮನದಲ್ಲಿ ಜೀವಂತವಾಗಿವೆ.!! ವರನಟ ಡಾ. ರಾಜಕುಮಾರ ಅವರ ಜೀವನವು ಶ್ರಮ, ನೈತಿಕತೆ ಮತ್ತು ಸರಳತೆಯ ಸಂಕೇತ. ಅವರು ಕನ್ನಡಿಗರ ಹೃದಯದಲ್ಲಿ ಸದಾ ಜೀವಂತ. ಅವರ ಹುಟ್ಟುಹಬ್ಬದ ಅಂಗವಾಗಿ ಅವರನ್ನು ಸ್ಮರಿಸುವುದು ನಮ್ಮ ಹೆಮ್ಮೆ.!!

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ತನಿಶ್ ಪೂಜಾರಿಗೆ ಅಭಿನಂದನೆ




​ಬಜಪೆ: ಇತ್ತೀಚೆಗೆ ನಡೆದ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಬಜಪೆಯ ಸೈಂಟ್ ಜೋಸೆಫ್ ಶಾಲೆಯ ವಿದ್ಯಾರ್ಥಿ ಮಾ| ತನಿಶ್ ಸಿ. ಪೂಜಾರಿ ಅವರು ಅತ್ಯುತ್ತಮ ಅಂಕಗಳನ್ನು ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ತನಿಶ್ ಅವರು ಒಟ್ಟು 625 ಅಂಕಗಳಲ್ಲಿ 562 ಅಂಕಗಳನ್ನು ಗಳಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರ ಈ ಶೈಕ್ಷಣಿಕ ಸಾಧನೆಗೆ ಶಾಲಾ ಮಂಡಳಿ ಹಾಗೂ ಸಮಾಜದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇವರು ಯುವವಾಹಿನಿ ಬಜಪೆ ಘಟಕದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಪೂಜಾರಿ ಹಾಗೂ ಮಾಜಿ ಉಪಾಧ್ಯಕ್ಷರಾದ ಶರ್ಮಿಳಾ ಚಂದ್ರಶೇಖರ್ ದಂಪತಿಗಳ ಪುತ್ರರಾಗಿದ್ದಾರೆ. ಈ ದಂಪತಿಗಳು ಬ್ರಹ್ಮ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜಪೆ - ಕರಂಬಾರು ಇದರ ಸಕ್ರಿಯ ಸದಸ್ಯರಾಗಿ ಗುರುತಿಸಿಕೊಂಡಿದ್ದಾರೆ.
ತನಿಶ್ ಅವರ ಸಾಧನೆಯನ್ನು ಗುರುತಿಸಿ 'ಬಿರುವ ಜವನೆರ್ ಉಡುಪಿ' ತಂಡವು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದೆ. ಬ್ರಹ್ಮ ಶ್ರೀ ನಾರಾಯಣ ಗುರುಗಳ ಆಶೀರ್ವಾದ ಸದಾ ಇರಲಿ, ಮುಂದಿನ ಶೈಕ್ಷಣಿಕ ಜೀವನವು ಉಜ್ವಲವಾಗಲಿ ಮತ್ತು ಸಮಾಜಕ್ಕೆ ಹೆಮ್ಮೆ ತರುವಂತಹ ಇನ್ನಷ್ಟು ಸಾಧನೆಗಳು ಅವರ ಮೂಲಕ ಮೂಡಿಬರಲಿ ಎಂದು ಹಿತೈಷಿಗಳು ಹಾರೈಸಿದ್ದಾರೆ.

​ಬೋರನಕಣಿವೆ ಸರ್ಕಾರಿ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ: ರೋಹಿಣಿ ಎಂ.ಸಿ. ಹಾಗೂ ವಿಸ್ಮಯ ಎಂ. ಸಾಧನೆ


​ಚಿಕ್ಕನಾಯಕನಹಳ್ಳಿ: ಇತ್ತೀಚೆಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ಫಲಿತಾಂಶದಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ಬೋರನಕಣಿವೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
​ಶಾಲೆಯ ವಿದ್ಯಾರ್ಥಿನಿ ರೋಹಿಣಿ ಎಂ.ಸಿ. ಅವರು ಒಟ್ಟು 625 ಅಂಕಗಳಿಗೆ 617 (98.72%) ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಓದಿ ಇಷ್ಟು ದೊಡ್ಡ ಮೊತ್ತದ ಅಂಕ ಗಳಿಸಿರುವುದು ಪೋಷಕರು ಹಾಗೂ ಶಿಕ್ಷಕ ವೃಂದದ ಹರ್ಷಕ್ಕೆ ಕಾರಣವಾಗಿದೆ.

​ಇವರ ನಂತರದ ಸ್ಥಾನದಲ್ಲಿ ವಿಸ್ಮಯ ಎಂ. ಹಳೆಯೂರು ಅವರು ಒಟ್ಟು 625 ಅಂಕಗಳಿಗೆ 606 (96.96%) ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನದೊಂದಿಗೆ ಶಾಲೆಗೆ ಅಭೂತಪೂರ್ವ ಯಶಸ್ಸು ತಂದುಕೊಟ್ಟಿದ್ದಾರೆ.

​"ಸತತ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು" ಎಂದು ವಿದ್ಯಾರ್ಥಿಗಳು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
​ಸರ್ಕಾರಿ ಶಾಲೆಯ ಈ ಗಮನಾರ್ಹ ಸಾಧನೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ಸಾಧಕ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
​ಈ ಉಜ್ವಲ ಸಾಧನೆ ಮಾಡಿದ ರೋಹಿಣಿ ಎಂ.ಸಿ. ಮತ್ತು ವಿಸ್ಮಯ ಎಂ. ಅವರಿಗೆ ಮುಂದಿನ ಭವಿಷ್ಯಕ್ಕಾಗಿ ಶುಭ ಹಾರೈಕೆಗಳು!

​ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 598 ಅಂಕ ಗಳಿಸಿದ ಕುಮಾರಿ ರಿತ್ವಿ ಆರ್. ಗೆ ಅಭಿನಂದನೆ

​ಬಜಪೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 598 ಅಂಕ ಗಳಿಸಿದ ಕುಮಾರಿ ರಿತ್ವಿ ಆರ್. ಗೆ ಅಭಿನಂದನೆ



​ಬಜಪೆ: ಎ25. ಇತ್ತೀಚೆಗೆ ಪ್ರಕಟವಾದ ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಜಪೆಯ ಬೆತಾನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ರಿತ್ವಿ ಆರ್. ಅವರು ಒಟ್ಟು 625 ಅಂಕಗಳಿಗೆ 598 ಅಂಕಗಳನ್ನು ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
​ಇವರು ಬಜಪೆ ರೋಟರಿ ಕ್ಲಬ್‌ನ ಸಕ್ರಿಯ ಸದಸ್ಯರಾದ ರೋ. ರವಿ ಪೂಜಾರಿ ಹಾಗೂ ಆದರ್ಶ ರವಿ ಪೂಜಾರಿ ದಂಪತಿಗಳ ಪುತ್ರಿಯಾಗಿದ್ದಾರೆ. ಅತಿ ಹೆಚ್ಚು ಅಂಕ ಗಳಿಸಿ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿರುವ ಇವರ ಶೈಕ್ಷಣಿಕ ಸಾಧನೆಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
​ಕುಮಾರಿ ರಿತ್ವಿ ಅವರ ಸಾಧನೆಯನ್ನು ಗುರುತಿಸಿ ಅವರಿಗೆ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದ್ದು, ಅವರ ಮುಂದಿನ ಶೈಕ್ಷಣಿಕ ಜೀವನವು ಇನ್ನಷ್ಟು ಉಜ್ವಲವಾಗಲಿ ಎಂದು ಶುಭ ಹಾರೈಸಲಾಗಿದೆ.
​ವರದಿ: ಜನಪರವಾಣಿ ಡಿಜಿಟಲ್ ಮೀಡಿಯಾ

​ಬಣ್ಣದ ಲೋಕದ ‘ಚಿನ್ನರಿ’ಗೆ ಓದಿನಲ್ಲೂ ಭರ್ಜರಿ ಅಂಕ: SSLC ಪರೀಕ್ಷೆಯಲ್ಲಿ ಮಿಂಚಿದ ನಟಿ ಅಂಕಿತಾ!


​ಬೆಂಗಳೂರು: ಎ25. ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಅಣ್ಣಯ್ಯ’ ಮೂಲಕ ರಾಜ್ಯದ ಮನೆಮಾತಾಗಿರುವ ನಟಿ ಅಂಕಿತಾ ಕೆ.ಎಂ., ಇದೀಗ ಶೈಕ್ಷಣಿಕ ಕ್ಷೇತ್ರದಲ್ಲೂ ಅಮೋಘ ಸಾಧನೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಪ್ರಕಟವಾದ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷಾ ಫಲಿತಾಂಶದಲ್ಲಿ ಅಂಕಿತಾ ಭರ್ಜರಿ ಅಂಕಗಳನ್ನು ಗಳಿಸಿ ‘ನಟನೆ ಮಾತ್ರವಲ್ಲ, ಓದಿನಲ್ಲೂ ನಾನು ಮುಂದು’ ಎಂಬುದನ್ನು ಸಾಬೀತುಪಡಿಸಿದ್ದಾರೆ.

ನಟಿ ಅಂಕಿತಾ ಅವರು ಒಟ್ಟು ೫೩೭ ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಶೇಷವೆಂದರೆ, ಭಾಷಾ ವಿಷಯಗಳಲ್ಲಿ ಕ್ರಮವಾಗಿ ೧೧೯ ಮತ್ತು ೧೦೦ ಅಂಕಗಳನ್ನು ಗಳಿಸಿ A+ ಗ್ರೇಡ್ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಉಳಿದ ಕೋರ್ ವಿಷಯಗಳಲ್ಲೂ ಅತ್ಯುತ್ತಮ ಸಾಧನೆ ಮಾಡಿರುವ ಅವರು, ಕಲೆ ಮತ್ತು ಶಿಕ್ಷಣ ಎರಡನ್ನೂ ಸಮತೋಲನವಾಗಿ ನಿಭಾಯಿಸಿ ಯಶಸ್ವಿಯಾಗಿದ್ದಾರೆ.

ಸಾಮಾನ್ಯವಾಗಿ ಬಣ್ಣದ ಲೋಕದ ಕಲಾವಿದರಿಗೆ ಶೂಟಿಂಗ್ ಒತ್ತಡದ ನಡುವೆ ಓದಿನ ಕಡೆ ಗಮನಹರಿಸುವುದು ಸವಾಲಿನ ಕೆಲಸ. ಆದರೆ ಅಂಕಿತಾ ಅವರು ಚಿತ್ರೀಕರಣದ ಸೆಟ್‌ನಲ್ಲೇ ಸಿಗುವ ಬಿಡುವಿನ ವೇಳೆಯನ್ನು ಓದಿಗೆ ಬಳಸಿಕೊಳ್ಳುತ್ತಿದ್ದರು. ಅವರ ಈ ಪರಿಶ್ರಮಕ್ಕೆ ಇಂದು ತಕ್ಕ ಪ್ರತಿಫಲ ಸಿಕ್ಕಿದೆ.

ಅಂಕಿತಾ ಅವರ ಈ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. "ರಿಯಲ್ ಲೈಫ್‌ನಲ್ಲೂ ನೀವು ಅತಿ ಬುದ್ಧಿವಂತ ಹುಡುಗಿ" ಎಂದು ನೆಟ್ಟಿಗರು ಹಾರೈಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಯಾವ ಹಾದಿಯನ್ನು ಆರಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.