ಕವನ: ಸಿಂಧೂರ ಬೇಡಿತು ಸಂಹಾರ*


ನಮ್ಮ ದೇಶದ ಯೋಧರಿಗೆ ನಮನ
ಪಹಲ್ಗಾಮದಲಿ ಕಣ್ಣೀರಿಟ್ಟ ಸಿಂಧೂರ
ಭಾರತದೇಶವೇ ರೋಧಿಸಿತು ಆದಿನ
ರಾಷ್ಟ್ರವೇ ಬೇಡಿತು ಉಗ್ರರ ಸಂಹಾರ

ಪಾಕಿಸ್ತಾನದಲಿಯೋಧರು ನುಗ್ಗಿದರು
ಆಪರೇಶನ್ ಸಿಂಧೂರ ಮಾಡಿಗೆದ್ದರು
ನೆಲ ಜಲ ವಾಯು ದಾಳಿ ಮಾಡಿದರು
ಉಗ್ರರಅಡಗುತಾಣಬೂದಿಮಾಡಿದರು

ಭಾರತೀಯ ನಾರಿಯ ಸಿಂಧೂರ ಶಕ್ತಿ 
ಮುತ್ತೈದೆಯ ಆಕ್ರೋಶ ಪತಿಯ ಭಕ್ತಿ 
ನಮ್ಮಮೋದೀಜಿಯ ಯೋಧರ ಯುಕ್ತಿ 
ಪಾಪಿಗಳಿಗೆ ಗುಂಡೇಟುಗಳಿಂದ ಮುಕ್ತಿ

ಕೆಚ್ಚೆದೆಯ ಯೋಧರ ವಾಯುದಾಳಿ
ರಕ್ತಬೀಜಾಸುರರ ನೆತ್ತರದೋಕುಳಿ
ಶಹಬ್ಬಾಸ್ ವೀರ ಶೂರ ಸೈನಿಕರೆ
ನಮ್ಮ ಅಭಿಮಾನ ನೀವು ಜವಾನರೆ 

ಲೇಖಕಿ: ಶ್ರೀಮತಿ ಅನ್ನಪೂರ್ಣ ಸಕ್ರೋಜಿ ಪುಣೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ