ಆಂಜನೇಯ



ಸಂಜೀವಿನಿ ಪರ್ವತವ ಹೊತ್ತು ತಂದ ದೇವಸಕಲರ ಸಲಹುತ ಅಭಯ ನೀಡುವಾ ದೇವಮಹಾ ಮಹಿಮ ವಾಯು ಪುತ್ರ ಶಕ್ತಿ ದೇವ ಬೆಂಬಿಡದೆ  ಪೊರೆಯುವ ಇಚ್ಛಾ ರೂಪಿ ದೇವ…

ತನ್ನ ಯೋಗ ಶಕ್ತಿಯನ್ನು ಜಾಗ್ರತಗೊಳಿಸಿಚೇತನ ರೂಪಾOತರದಿ ಜಡದೇಹವ ತ್ಯಜಿಸಿಒಂದೇ ಉಸಿರಿನಲಿ ಸಾಗರದಾಚೆ ಹಾರಿದನು ಸೀತೆಗೆ ರಾಮನ ಮುದ್ರಿಕೆಯ ತಲುಪಿಸಿದನು… ರೂಪರಾವರ್ತನೆಯಿಂದ ಶಿಶುವಾಗಿ ಮಲಗಿದ ಕಂದ

ಸೀತೆಯ ವಾತ್ಸಲ್ಯದಿಂದ ಹಿಗ್ಗಿದ ಮಾತೃ ಪ್ರೇಮದಿಂದಮಾತೆಯ ಕರ ಸ್ಪರ್ಶದಿಂದ ಪುನೀತನಾದೆನು ಎಂದಅಕ್ಕರೆಯಲಿ ಅಮ್ಮ ಎಂದ ತೊದಲು ನುಡಿಯಿಂದ… 

ದಾಸರಲ್ಲಿ ಶ್ರೇಷ್ಠ ಅಂಜನತನಯ ಆಂಜನೇಯವಾನರ ಶ್ರೇಷ್ಠ ವಾಯು ಪುತ್ರ ಶ್ರೀ ರಾಮಪ್ರಿಯಕೇಸರಿ ನಂದನ ರಾಮದೂತ ಶಕ್ತಿ ಹನುಮಂತಸುಂದರ ಮಾರುತಿ ನಮ್ಮಕಾಯೋ ಅಂಜನಸುತ…


               ರಚನೆಡಾ

. ವಾಣಿಶ್ರೀ ಕಾಸರಗೋಡುಗ

        ಡಿನಾಡ ಕನ್ನಡತಿ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ