ಅಂತಾರಾಷ್ಟ್ರೀಯ ಕ್ರೀಡಾ ಕೂಟದ ಬಹುಮುಖ ಪ್ರತಿಭೆ: ಶ್ರೀಮತಿ ಭೂಲಕ್ಷ್ಮೀ ಅವರು“ಸರಸ್ವತಿ ಸಾಧಕ ಸಿರಿ” ರಾಷ್ಟ್ರ ಪ್ರಶಸ್ತಿಗೆ.

ದಾವಣಗೆರೆ: ಎ16. ಜಿಲ್ಲೆಯ ಕುಂಟಪಾಲನಹಳ್ಳಿಯ ಅಂತರಾಷ್ಟ್ರೀಯ ಕ್ರೀಡಾ ಕೂಟದ ಬಹುಮುಖಪ್ರತಿಭೆ ಶ್ರೀಮತಿ ಭೂಲಕ್ಷ್ಮೀ ಅವರು "ಸರಸ್ವತಿ ಸಾಧಕ ಸಿರಿ" ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೃತ್ತಿ ಜೀವನದಲ್ಲಿ ಶಿಸ್ತಿನ ಶ್ರೇಷ್ಠ ಮಾದರಿ ಪಿಯುಸಿ ಮತ್ತು ಎನ್.ಟಿ.ಸಿ. ತರಬೇತಿಯನ್ನು ಪೂರ್ಣಗೊಳಿಸಿರುವ ಭೂಲಕ್ಷ್ಮೀ ಅವರು, ತಮ್ಮ ವೃತ್ತಿ ಜೀವನದಲ್ಲಿ ನಿಷ್ಠೆ, ಜವಾಬ್ದಾರಿ ಮತ್ತು ಶಿಸ್ತುತನಕ್ಕೆ ಅಜರಾಮರ ಮಾದರಿಯಾಗಿದ್ದಾರೆ ಹಾಗೂ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಮಾಡುತ್ತಾ ಸಾವಿರಾರು ಜನರಿಗೆ ಸ್ಪೂರ್ತಿ ನೀಡಿದ್ದಾರೆ.

ಸಾಹಿತ್ಯ, ಸಂಗೀತ, ಸಮಾಜದ ಒಳಿತಿಗಾಗಿ ಸಮರ್ಪಿತ ಜೀವನ ಭೂಲಕ್ಷ್ಮೀಯವರು ಕವಿತೆ, ಚುಟುಕು ಸಾಹಿತ್ಯ, ಸಂಗೀತ, ನೃತ್ಯ, ಜಾನಪದ ಗೀತೆಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆ ಮತ್ತು ಶ್ರದ್ಧೆಯ ಪ್ರಭಾವ ಬೀರಿದ್ದಾರೆ. ಸಾಹಿತ್ಯ ಪ್ರಸ್ತುತಿ ಮತ್ತು ಸಂಗೀತ ಪ್ರದರ್ಶನದ ಮೂಲಕ ನಾಡಿಗೆ ಮೌಲ್ಯಯುತ ಕೊಡುಗೆ ನೀಡಿರುತ್ತಾರೆ.

ಪ್ರತಿಯೊಂದು ಕಾಯಕವನ್ನು ನಿಷ್ಠೆಯಿಂದ ಮಾಡಿರುತ್ತಾರೆ. ಇವರ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಹಲವಾರು ಸಾಂಸ್ಕೃತಿಕ ಸೇವೆಗೆ ಜಿಲ್ಲಾ, ರಾಜ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳು ದೊರಕಿವೆ. ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ, ಕ್ರೀಡೆ, ವಿವಿಧ ಸಾಂಸ್ಕೃತಿಕ ಸೇವೆಯನ್ನು ಗುರುತಿಸಿ ಭೂಲಕ್ಷ್ಮೀ ಅವರನ್ನು “ಸರಸ್ವತಿ ಸಾಧಕ ಸಿರಿ” ರಾಷ್ಟ್ರ  ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

ಇವರಿಗೆ “ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ”, ಏಪ್ರಿಲ್ 27, 2025 ರಂದು ದಾವಣಗೆರೆ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಸಾಂಸ್ಕೃತಿಕ ಸಮಾರಂಭದಲ್ಲಿ “ಸರಸ್ವತಿ ಸಾಧಕ ಸಿರಿ” ರಾಷ್ಟ್ರ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದುಎಂದು ಪ್ರಕಟಣೆಯಲ್ಲಿ ಸಂಸ್ಥಾಪಕರಾದ ಶ್ರೀ ಸಾಲಿಗ್ರಾಮ ಗಣೇಶ ಶೆಣೈ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ