ಅಮ್ಮನ ಮಡಿಲೇ ಸ್ವರ್ಗ

ಅಮ್ಮನ ಮಡಿಲೇ ಸ್ವರ್ಗ

ಅಮ್ಮನ ಮಡಿಲು ಸ್ವರ್ಗಕ್ಕೂ ಮಿಗಿಲು
ಎನಗೆ ಬಹು ಖುಷಿ ಹೆತ್ತವರು ನಗುತಿರಲು
ಎಲ್ಲಿಲ್ಲದ ಸಂತೋಷ ಗೆಳೆಯ ಬರುತಿರಲು
ಕಾಯುವೆ ಅಮ್ಮ ನಂಗೆ ಏನಾದರೂ ತರಲು

ಬೆಲೆ ಕಟ್ಟಲಾಗದು ತಾಯಿಯ ತ್ಯಾಗದಲ್ಲಿ
ಋಣ ತೀರಿಸಲಾಗದು ಮಾತೆಯ ಪ್ರೀತಿಯಲ್ಲಿ
ಮುಕ್ತಿ ಹೊಂದಬೇಕು ಹಡೆದವರ ಸೇವೆಯಲ್ಲಿ
ಮುಕ್ಕೋಟಿ ದೇವರು ಅಮ್ಮನ ಪಾದದಡಿಯಲ್ಲಿ

ನವ ಮಾಸ ಹೊಟ್ಟೆಯಲ್ಲಿ ಇಟ್ಕೊಂಡಿರ್ತಾಳೆ
ನಾವು ದೊಡ್ಡವರಾಗೋತನಕ ಸಾಕಿರ್ತಾಳೆ
ನಮ್ಮ ಹೊಟ್ಟೆಗಾಗಿ ಬೆವರನಿ ಸುರಿಸಿರ್ತಾಳೆ
ಕುಟುಂಬಕ್ಕಾಗಿ ಜೀವನ ಮೂಡುಪಾಗಿಟ್ಟಿರ್ತಾಳೆ

ನಮ್ಮ ಉಸಿರಿರೋತನಕ ಸೇವೆ ಮಾಡೋಣ
ಹೆತ್ತವರಿರೋತನಕ ಜೋಪಾನ ಮಾಡೋಣ
ಎಲ್ಲರನ್ನು ನಗಿಸುತ್ತಾ ನಲಿಯುತ್ತಾ ಸಾಗೋಣ
ಹಡೆದವರನ್ನ ಆರಾಧಿಸಿ ಮುಕ್ತಿ ಹೊಂದೋಣ…

ರಾಘವೇಂದ್ರ ಎಚ್ ಹಳ್ಳಿ ಕೊಪ್ಪಳ.

               ಪ್ರೇಮ



ಪ್ರೇಮವೆಂದರೆ'''''''''
ಕ್ಯಾಲೆಂಡರಿನೊಂದಿಗೆ  
ದಿನಾಂಕ ಗುರುತಿಸಿ
ಗುಲಾಬಿ ಹೂ ಕಿತ್ತು
ಮಂಡಿಯೂರಿ ಕೇಳಿಕೊಳ್ಳುವ,
ಬೇಡಿಕೊಳ್ಳುವ
ನಿವೇದನೆಯಲ್ಲ !
ಎಲ್ಲ ಕಾಲಕೂ 
ಮಿಡಿದು ತುಡಿಯುವ ಸ್ವಚಂದ 
ಕಂಗೊಳಿಸುವ ನಿನ್ನಯ
 *ನಿರ್ಮಲ ಭಾವ* !

ಪ್ರೇಮವೆಂದರೆ'''''''''
ಅರ್ಧರಾತ್ರಿಯಲಿ 
ನಶೆ ಬೀಜ ತುಂಬಿಕೊಂಡು ನಿರ್ಮಲವೆಂಬ
ಸಭ್ಯತೆಯ ಗೆರೆ ದಾಟಿ ಹದ್ದು ಮೀರಿ
ಕುಣಿಯುವುದಲ್ಲ !
ತಂತಾನೇ ಸೃಜಿಸಿ
ಕಂಗಳೊಳಗೆ 
ಸರಿದಾಡುವ,ಸರಿದೂಗುವ ನಿನ್ನ
*ಅಭಿವ್ಯಕ್ತವಾದ ಭಾಷೆ* !

ಪ್ರೇಮವೆಂದರೆ'''''''''
ನಿಗದಿಯಾದ ಬೆಲೆಗೆ
ತಕ್ಕಷ್ಟು ತೂಗುವ
ಸಂತೆಯೊಳಗಣ ವಸ್ತುವೆಂಬಂತೆ ಭಾವಿಸುವ 
ಸಾಮಗ್ರಿಯಲ್ಲ !
ಫಲ ನಿರೀಕ್ಷಿಸದೆಯೆe
ಬಲವಾಗೊಳ್ಳುವ ನಿನ್ನಯ
 *ನಿರಾಕಾಂಕ್ಷ ನಿರಪೇಕ್ಷ ಕ್ರಿಯೆ* 

  *ರಾಘವೇಂದ್ರ ಎಚ್,ಹಳ್ಳಿ ಕೊಪ್ಪಳ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ