ಅಯ್ಯಪ್ಪ ಸ್ವಾಮಿ ಶ್ಲೋಕ ಗಳು!!



ಲೋಕವೀರಂ ಮಹಾಪೂಜ್ಯಂ!.
ಸರ್ವರಕ್ಷಾಕರಂ ವಿಭುಂ! ಪಾರ್ವತಿ ಹೃದಯಾನಂದಂ!
ಶಾಸ್ತಾರಂ ಪ್ರಣಮಾಮ್ಯಹಂ!!

 ವಿಪ್ರಪೂಜ್ಯಂ ವಿಶ್ವವಂದ್ಯಂ!
ವಿಷ್ಣು ಶಂಭುಂ ಪ್ರಿಯಂ ಸುತಂ!
ಕ್ಷಿಪ್ರ ಪ್ರಸಾದ ನಿರತಂ!
ಶಾಸ್ತಾರಂ ಪ್ರಣಮಾಮ್ಯಹಂ!!

ಮತ್ತ ಮಾತಂಗ ಗಮನಂ!
ಕಾರುಣ್ಯಮೃತ ಪೂಜಿತಂ!
ಸರ್ವವಿಘ್ನ ಹರಂ ದೇವಂ!
ಶಾಸ್ತಾರಂ. ಪ್ರಣಮಾಮ್ಯಹಂ!!

ಅಸ್ಮತ್ ಕುಲೇಶ್ವರ ದೇವಂ!
ಅಸ್ಮತ್ ಶತ್ರು ವಿನಾಶನಂ!
ಅಸ್ಮದಿಷ್ಟ ಪ್ರದಾತಾರಂ!
ಶಾಸ್ತಾರಂ ಪ್ರಣಮಾಮ್ಯಹಂ!!

ಶಿವವೀರ್ಯ ಸಮದ್ಧೂತಂ!
ಶ್ರೀನಿವಾಸ ತನುರ್ಭೂವಂ!
ಶಿಖಿವಾಹನ ಅಹಂವಂದ್ಯಂ!
ಶಾಸ್ತಾರಂ. ಪ್ರಣಮಾಮ್ಯಹಂ!!

ಶ್ರೀ ಭೂತನಾಥ ಸದಾನಂದ!
ಸರ್ವಭೂತ ದಯಾಪರ!
ರಕ್ಷ ರಕ್ಷಾ ಮಹಾಭಾವೋ!
ಶಾಸ್ತಾರಂ ತುಭ್ಯೋ ನಮೋನಮಃ! 

ಪಾಂಡ್ಯೇಶ ವಂಶತಿಲಕಂ!
ಕೇರಳೇ ಕೇಲಿ ವಿಗ್ರಹಂ!
ಅರ್ತತ್ರಾಣ ಪರಂ ದೇವಂ!
 ಶಾಸ್ತಾರಂ ಪ್ರಣಮಾಮ್ಯಹಂ!!

ಪಂಚರತ್ನ ಕ್ಷಮೇದಾರ್ಥಂ.!
ನಿತ್ಯಂ ಶುದ್ದಃ ಪಠೇನ್ನರಃ!
, ತಸ್ಯ ಪ್ರಸನ್ನೋ. ಭಗವಾನ್!
ಶಾಸ್ತಾ ವಸತಿ ಮಾನಸೇ!!
   ಸ್ವಾಮಿಯೇ ಶರಣಂ ಅಯ್ಯಪ್ಪ!!!!


ಅಯ್ಯಪ್ಪ ಸ್ವಾಮಿ ಬಾಗಿಲು ಮುಚ್ಚಿದ ಮೇಲೆ ಈ ಹಾಡು!!

ಹರಿವರಾಸನಂ ಸ್ವಾಮಿ ವಿಶ್ವ ಮೋಹನಂ! ಹರಿದದೀಶ್ವರಂ ಆರಾಧ್ಯ ಪಾದುಕಂ!ಅರಿವಿಮರ್ದನಂ ಸ್ವಾಮಿ ನಿತ್ಯ ನರ್ತನಂ!ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!

ಶರಣ ಕೀರ್ತನಂ ಸ್ವಾಮಿ ಶಕ್ತ ಮಾನಸಂ!ಭರಣಲೋಲಪಂ ಸ್ವಾಮಿ ನರ್ತನಾಲಾಸಂ!ಅರುಣಭಾಸುರಂ ಸ್ವಾಮಿ ಭೂತನಾಯಯಕಂ!
ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!!

ಪ್ರಣಯಸತ್ಯಕಂ ಸ್ವಾಮಿ ಪ್ರಾಣನಾಯಕಂ! ಪ್ರಣತಕಲ್ಪಕಂ ಸ್ವಾಮಿ ಸುಪ್ರಭಾಂಜಿತಂ! ಪ್ರಣವಮಂದಿರಂ ಸ್ವಾಮಿ ಕೀರ್ತನಪ್ರಿಯಂ! ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!!

ತುರಗವಾಹನಂ ಸ್ವಾಮಿ ಸುಂದರಾನನಂ!ವರಗಧಾಯುಧಂ ಸ್ವಾಮಿ ವೇದವರ್ಣಿತಂ! ಗುರುಕೃಪಾಕರಂ ಸ್ವಾಮಿ ಕೀರ್ತನಪ್ರಿಯಂ! ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!

ತ್ರಿಭುವನಾರ್ಚಿತಂ ಸ್ವಾಮಿ ದೇವತಾತ್ಮಕಂ! ತ್ರಿನಯನಂ ಪ್ರಭುಂ ಸ್ವಾಮಿ ದಿವ್ಯ ದೇಶಿಕಂ!
ತ್ರಿದಶಪೂಜಿತಂ ಸ್ವಾಮಿ ಚಿಂತಿತಪ್ರದಂ!ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!

ಭವಭಯಾಪಹಂ ಸ್ವಾಮಿ ಭಾವುಕಾವಹಂ! ಭುವನಮೋಹನಂ ಸ್ವಾಮಿ ಭೂತಿಭೂಷಣಂ! ಧವಳವಾಹನಂ ಸ್ವಾಮಿ ದಿವ್ಯವಾರಣಂ! ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!

ಕಳಮೃದುಸ್ಮಿತಂ ಸ್ವಾಮಿ ಸುಂದರಾನನಂ! ಕಳಭಕೋಮಲಂ ಸ್ವಾಮಿ ಗಾತ್ರ ಮೋಹನಂ! ಕಳಭಕೇಸರಿ ಸ್ವಾಮಿ ವಾಜಿವಹನಂ! ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!

ಶ್ರಿತಜನಪ್ರಿಯಂ ಸ್ವಾಮಿ ಚಿಂತಿತಪ್ರದಂ! ಶ್ರುತಿ ವಿಭೂಷಣಂ ಸ್ವಾಮಿ ಸಾಧುಜೀವನಂ! ಶ್ರುತಿ ಮನೊಹರಂ ಸ್ವಾಮಿ ಗೀತಲಾಲಸಂ! ಹರಿಹರಾತ್ಮಜಂ ಸ್ವಾಮಿ ದೇವಮಾಶ್ರಯೇ!!
.. ಶರಣಂ ಅಯ್ಯಪ್ಪ, ಸ್ವಾಮಿ ಶರಣಂ ಅಯ್ಯಪ್ಪ (ಎರಡು ಸಾರಿ  ಹೇಳಬೇಕು )
ಎಲ್ಲರಿಗೂ ಅಯ್ಯಪ್ಪ ಸ್ವಾಮಿ ಹಾರ್ಧಿಕ ಶುಭಾಶಯಗಳು 
 ಕೆ ಆರ್ ಸುಮತೀಂದ್ರ ಲೇಖಕರು ಮತ್ತು ಅರ್ಚಕರು.
ದಾವಣಗೆರೆ

ಅಮ್ಮನ ಮಡಿಲೇ ಸ್ವರ್ಗ

ಅಮ್ಮನ ಮಡಿಲೇ ಸ್ವರ್ಗ

ಅಮ್ಮನ ಮಡಿಲು ಸ್ವರ್ಗಕ್ಕೂ ಮಿಗಿಲು
ಎನಗೆ ಬಹು ಖುಷಿ ಹೆತ್ತವರು ನಗುತಿರಲು
ಎಲ್ಲಿಲ್ಲದ ಸಂತೋಷ ಗೆಳೆಯ ಬರುತಿರಲು
ಕಾಯುವೆ ಅಮ್ಮ ನಂಗೆ ಏನಾದರೂ ತರಲು

ಬೆಲೆ ಕಟ್ಟಲಾಗದು ತಾಯಿಯ ತ್ಯಾಗದಲ್ಲಿ
ಋಣ ತೀರಿಸಲಾಗದು ಮಾತೆಯ ಪ್ರೀತಿಯಲ್ಲಿ
ಮುಕ್ತಿ ಹೊಂದಬೇಕು ಹಡೆದವರ ಸೇವೆಯಲ್ಲಿ
ಮುಕ್ಕೋಟಿ ದೇವರು ಅಮ್ಮನ ಪಾದದಡಿಯಲ್ಲಿ

ನವ ಮಾಸ ಹೊಟ್ಟೆಯಲ್ಲಿ ಇಟ್ಕೊಂಡಿರ್ತಾಳೆ
ನಾವು ದೊಡ್ಡವರಾಗೋತನಕ ಸಾಕಿರ್ತಾಳೆ
ನಮ್ಮ ಹೊಟ್ಟೆಗಾಗಿ ಬೆವರನಿ ಸುರಿಸಿರ್ತಾಳೆ
ಕುಟುಂಬಕ್ಕಾಗಿ ಜೀವನ ಮೂಡುಪಾಗಿಟ್ಟಿರ್ತಾಳೆ

ನಮ್ಮ ಉಸಿರಿರೋತನಕ ಸೇವೆ ಮಾಡೋಣ
ಹೆತ್ತವರಿರೋತನಕ ಜೋಪಾನ ಮಾಡೋಣ
ಎಲ್ಲರನ್ನು ನಗಿಸುತ್ತಾ ನಲಿಯುತ್ತಾ ಸಾಗೋಣ
ಹಡೆದವರನ್ನ ಆರಾಧಿಸಿ ಮುಕ್ತಿ ಹೊಂದೋಣ…

ರಾಘವೇಂದ್ರ ಎಚ್ ಹಳ್ಳಿ ಕೊಪ್ಪಳ.

               ಪ್ರೇಮ



ಪ್ರೇಮವೆಂದರೆ'''''''''
ಕ್ಯಾಲೆಂಡರಿನೊಂದಿಗೆ  
ದಿನಾಂಕ ಗುರುತಿಸಿ
ಗುಲಾಬಿ ಹೂ ಕಿತ್ತು
ಮಂಡಿಯೂರಿ ಕೇಳಿಕೊಳ್ಳುವ,
ಬೇಡಿಕೊಳ್ಳುವ
ನಿವೇದನೆಯಲ್ಲ !
ಎಲ್ಲ ಕಾಲಕೂ 
ಮಿಡಿದು ತುಡಿಯುವ ಸ್ವಚಂದ 
ಕಂಗೊಳಿಸುವ ನಿನ್ನಯ
 *ನಿರ್ಮಲ ಭಾವ* !

ಪ್ರೇಮವೆಂದರೆ'''''''''
ಅರ್ಧರಾತ್ರಿಯಲಿ 
ನಶೆ ಬೀಜ ತುಂಬಿಕೊಂಡು ನಿರ್ಮಲವೆಂಬ
ಸಭ್ಯತೆಯ ಗೆರೆ ದಾಟಿ ಹದ್ದು ಮೀರಿ
ಕುಣಿಯುವುದಲ್ಲ !
ತಂತಾನೇ ಸೃಜಿಸಿ
ಕಂಗಳೊಳಗೆ 
ಸರಿದಾಡುವ,ಸರಿದೂಗುವ ನಿನ್ನ
*ಅಭಿವ್ಯಕ್ತವಾದ ಭಾಷೆ* !

ಪ್ರೇಮವೆಂದರೆ'''''''''
ನಿಗದಿಯಾದ ಬೆಲೆಗೆ
ತಕ್ಕಷ್ಟು ತೂಗುವ
ಸಂತೆಯೊಳಗಣ ವಸ್ತುವೆಂಬಂತೆ ಭಾವಿಸುವ 
ಸಾಮಗ್ರಿಯಲ್ಲ !
ಫಲ ನಿರೀಕ್ಷಿಸದೆಯೆe
ಬಲವಾಗೊಳ್ಳುವ ನಿನ್ನಯ
 *ನಿರಾಕಾಂಕ್ಷ ನಿರಪೇಕ್ಷ ಕ್ರಿಯೆ* 

  *ರಾಘವೇಂದ್ರ ಎಚ್,ಹಳ್ಳಿ ಕೊಪ್ಪಳ.

ಹೂವಿನ ಬಗ್ಗೆ ಕವನ!!, ಹೊಂಗೆಯ ತಂಪು ನೀನು!ಜಾಜಿಯ ಕಂಪು ನಾನು!ಸೇವಂತಿಯ ಸೊಂಪು ನೀನು!ಗುಲಾಬಿಯ ಕೆಂಪು ನಾನು!!ಮಂದಾರದ ಸೊಗಸು ನೀನು!ತಾವರೆಯ ಸೊಬಗು ನಾನು!ಮಲ್ಲಿಗೆಯ ಸುವಾಸನೆ ನೀನು!ಸಂಪಿಗೆಯ ಸುಗಂಧ ನಾನು!!ಪಾರಿಜಾತದ ಪರಿಮಳ ನೀನು!ಸೂರ್ಯಕಾಂತಿಯ ಸುರಿಮಳೆ ನಾನು! ಸುಗಂಧರಾಜದ ಮಕರಂದ ನೀನು! ಕನಕಾಂಬರದ ಅಂದ ಚೆಂದ ನಾನು!!ನನ್ನ ಕವನ!!ಮನಸ್ಸಿನ ಭಾರವನ್ನು ಇಳಿಸುವುದು ಈ ನನ್ನ ಕವನ! ಹೃದಯದ ಮಿಡಿತವನ್ನು ಅಳೆಯುವುದು ಈ ನನ್ನ ಕವನ! ಸಂತೋಷದ ನಿಮಿಷವೇ ಹುಟ್ಟುವುದು ಈ ನನ್ನ ಕವನ! ನೋವು ನಲಿವಿನ ನಡುವೆ ಮುದ ನೀಡುವುದು ಈ ನನ್ನ ಕವನ!!ಮನಸು ಮನಸುಗಳ ಒಂದಾಗಿಸುವುದು ಈ ನನ್ನ ಕವನ! ಭಾವನೆಗಳನ್ನು ರವಾನಿಸುತ್ತಾ ಬೆಳಸುವುದು ಈನನ್ನ ಕವನ! ಹೇಳಹೊರಟರೆ ತೀರದು ಈ ನನ್ನ ಕವನ!ಬೆಳೆಸುತಿರಲಿ ಭಾಂಧವ್ಯವನ್ನು ಈ ನನ್ನ ಕವನ!!ಹೃದಯದ ಮಾತು!!ಎನಗಂದು ಇರಲಿಲ್ಲ ಸಂತೋಷದ ಅಧ್ಯಾಯ! ಎನಗಿದೆ ಪ್ರಾಮಾಣಿಕತೆಯಿಂದ ಸಹೃದಯ! ದುಡಿದು ಜಯಿಸಬೇಕೆಂಬುದು ನನ್ನ ನ್ಯಾಯ! ದೂರಾಗಲು ಹೇಳಬೇಡ ಇಲ್ಲಸಲ್ಲದ ಉಪಾಯ!!ಇಂದು ಎನಗಿದೆ ಸುಂದರ ಮನಮೋಹಕ ಕಾಯ! ಕಾರು ಬಾರು, ಆಫೀಸು ಹಲವಾರು ಆದಾಯ! ನಿನ್ನ ಕಷ್ಟಕಾರ್ಪಣ್ಯಗಳು ಹೇಳಿಬಿಡು ವಿದಾಯ! . ಮನಸಾರೆ ಸೇರಿಬಿಡು ತೆರೆದಿಟ್ಟ ನನ್ನ ಹೃದಯ!! ಕೆ ಆರ್ ಸುಮತೀಂದ್ರ ಲೇಖಕರು

ಏಕೆ ಹೀಗೆ

ಏಕೆ ಹೀಗೆ
*********

ನಿನ್ನೊಳಗೆ ನಗುವಿರದೆ
ನಿ ಚಡಪಡಿಸುತಿರಲು 
ನಾ ನಗುವಿನಲಿ ಇದ್ದೆಂದು 
ಹೇಗೆ ನಿ ತಿಳಿದೆ.

ನಿನ್ನ ಬಯಕೆಯದು 
ನನಗೆ ಆದೇಶವು
ಹೇಳಿ ಬಿಡು ನನ್ನ ಸಖಿ
ಏನಾದರಾಗಲಿ

ಕ್ರೋದದಲಿ ನಿ ಸಿಲುಕಿ
ಹೊರಬರದೆ ಇದ್ದರೆ
ನನ್ನೊಳಗೂ ಜೀವಸೆಲೆ
ಬತ್ತುವುದಲ್ಲವೇ  ಸಖಿ

ಇಂದು ನಿನ್ನೆಯದಲ್ಲ
ಜನ್ಮ ಜನ್ಮಾಂತರದ್ದು
ಮರೆತೆ ಎಂದು ಕ್ಷಣವಾದರೂ
ಹೇಗಂದುಕೊಂಡೆ ಸಖಿ

-ಉಮೇಶ ಮುಂಡಳ್ಳಿ ಭಟ್ಕಳ

ಕವನಗಳ ಗುಚ್ಛ

ಕವನಗಳ ಗುಚ್ಛ

ಸೂರ್ಯನ ಹೊಳಪುಳ್ಳವಳು ನೀನು!
ನಿನ್ನ ಮೊಗದ ಹೊಳಪಿಗೆ‌ ನಾನು!

ಕಡಲಲ್ಲಿರುವ ಅಲೆಗಳು ನೀನು!
ನಿನ್ನ ನಗುವಿನ ಸೊಬಗಿಗೆ ಬಿದ್ದವನು ನಾನು!

ಕೋಗಿಲೆಯಂಥ ಧ್ವನಿವುಳ್ಳವಳು ನೀನು! ನಿನ್ನ ಕಂಠಕ್ಕೆ‌ ಬೆರಗಾದವನು ನಾನು!!

ಮುಗಿಲಲ್ಲಿ ಹೊಳೆವ ನಕ್ಷತ್ರದಂತೆ ನೀನು!
ನಿನ್ನ ಅಂದವನ್ನು ನೋಡಿ ಮೋಹಿತನಾದೆ ನಾನು!!

ಮೇಘದಿಂದ ಬರುವ ಸೋನೆಮಳೆಯಂತೆ ನೀನು!
ನಿನ್ನ ಆಗಮನಕ್ಕಾಗಿ ಕಾದಿರುವ ಧರೆಯಂತೆ ನಾನು!!

ಅಂಧಕಾರದಲ್ಲಿ ಜೊತೆ ಬರುವ ನೆರಳಿನಂತೆ ನೀನು! ಜ್ಞಾನದ ದೀಪದೆಡೆಗೆ   ಕರೆದೊಯ್ಯಲು ಹಂಬಲಿಸಿರುವೆ ನಾನು!!

ಬಾನಲ್ಲಿರುವ ಶಶಿಯಂತೆ ನೀನು!
ನಿನ್ನ ಸ್ವರ್ಶಿಸಲು‌ ಬರುವ ಅಲೆಯಂತೆ ನಾನು!!!

ಕರಗಿತು ಮೌನ! ನೆನೆದವು ನಯನ!
ತೊದಲಿತು ಮಾತು! ನಿನ್ನ ಕಂಡ ಕೂಡಲೇ!!

ಹೃದಯ ತುಂಬಿತ್ತು! ಮನಸ್ಸು ಕುಣಿಯಿತು!ಮುಖದಲ್ಲಿ ನಗು ಬೀರಿತು!
ನಿನ್ನ ಕಂಡ ಕೂಡಲೇ ಮೌನ ಮಾಯವಾಯಿತು!!

ಸೂರ್ಯ ಮರೆಯಾದ! ಮೋಡ ಮುಸುಕಿದವು! ವರ್ಷ ಸುರಿಯಿತು!
ನಿನ್ನ ಕಂಡ ಕೂಡಲೇ ಮೌನ ಮಾಯವಾಯಿತು!!

ಚಂದ್ರ ನಾಚಿದ! ಅಲೆ ಅಪ್ಪಳಿಸಿದವು!
ನಕ್ಷತ್ರ ಮಿನುಗಿದವು! ನಿನ್ನ ಕಂಡ ಕೂಡಲೇ ಮೌನ ಮಾಯವಾಯಿತು!!

ಕಾಗದದಲ್ಲೇ ದುಂಬಿಯನ್ನು ಕರೆಸಿ!
ಮಕರಂದವನ್ನು ಸವಿಸುವ ಇವನು!!

ರೆಕ್ಕೆಯಿಲ್ಲದ ಹಕ್ಕಿಯನ್ನು!
ತನ್ನ ನುಡಿಯಲ್ಲಿ ಹಾರಿಸುವವ ಇವನು!!

ಮೌನಿಯನ್ನು ಪದಗಳಲ್ಲಿ!
ಮಾತನಾಡಿಸುವವ‌ ಇವನು!!

ವಿಜ್ಞಾನಿ ಕಾಣದ್ದನ್ನು ಸುಜ್ಞಾನಿ!
ಕಂಡವವ ಇವನು!!

ಯಾರಿವನು? ಯಾರಿವನು?
ಕವಿ ಇವನು ಶಾರದೆಯ ಮಗನೂ
   ಇವನು!!

ರವಿ ಕಾಣದ್ದನ್ನು ಕವಿ !
..ಕಂಡವನು ಇವನು!!!!

ಕಥೆಯೊಂದನ್ನು ಹೇಳಬೇಕೆಂದಿದೆ ಮನ!
ಹುಡುಕುತಿಹೆ ಪದಗಳ ಅದನ್ನ ಬಿತ್ತರಿಸಿಸಲು ಈ ಕವನ! ಸೂತಪುತ್ರ ನೆಂದರೆ ಇವನಿಗೆ ಪ್ರಾಣ! ಅವನಂತೆ ಇವನಿಗೂ ನೋವುಗಳೇ ನೆಚ್ಚಿನ ತಾಣ!
ಪ್ರತಿ ಹೆಜ್ಜೆಯಲ್ಲೂ ಇವನಿಗೆ ಅನುಮಾನ! ಬಿಡುತ್ತಿಲ್ಲ ಆದರೂ ಗುರಿಯೇಡಿನ ಯಾನ! ಅವಳ ಜೊತೆ ನಡೆಯುತ್ತಿದೆ ಸಂತೋಷದ ಪಯಣ!!

ಕೆ ಆರ್ ಸುಮತೀಂದ್ರ ಲೇಖಕರು.

ನನ್ನವಳು


ಕನಸು ಕಟ್ಟಿದವಳು
ಮನಸ್ಸು ಬಿಚ್ಚಿದವಳು
ಮೌನದಲಿ ಮನದೊಳಗೆ
 ಮನೆಮಾಡಿದವಳು
ಆಕೆ ನನ್ನವಳು

ಕೂಸಾಗಿ ನನ್ನೊಡನೆ
ಕದನವನೆ ಗೈದವಳು
ಕೂಸನ್ನೆ ಕೈಗಿತ್ತು
ನೆನಪಿನಲಿ ನಕ್ಕವಳು
ಆಕೆ ನನ್ನವಳು

ಒಮ್ಮೊಮ್ಮೆ ಮಿಂಚಂತೆ
ಇನ್ನೊಮ್ಮೆ ಗುಡುಗಂತೆ
ಕೊನೆಗೂ ಬರಿ ಮಳೆಯಾಗಿ
ಹೂವಾಗಿ ಸುರಿವವಳು
ಆಕೆ ನನ್ನವಳು

ಅವಳಿಲ್ಲದೆ ಉಸಿರಿಲ್ಲ
ಉಸಿರಿಲ್ಲದೆ ಹಸಿರಿಲ್ಲ
ಉಸಿರು ಕಟ್ಟುವ ಗಳಿಗೆ
ಜೀವ ಗಂಗೆಯಾದವಳು
ಆಕೆ ನನ್ನವಳು

ರಚನೆ: ಉಮೇಶ ಮುಂಡಳ್ಳಿ ಭಟ್ಕಳ

ಉಗ್ರರೇ ಎಚ್ಚರ


ಭಾರತೀಯ ನಾರಿ ರೊಚ್ಚಿಗೆದ್ದರೆ 
ಬೆಂಕಿಯ ಬಾಣ ಸುರಿಸುವಳು 
ರಕ್ತದೋಕುಳಿ ಆಡುವಳು 

ಪಾಪಿಗಳೇ ಸಿಂಧೂರ ಅಳಿಸಿದಿರಾ
ಸೈನಿಕರು ಸುಮ್ಮನಿರುವರೇ
ಅಟ್ಟಾಡಿಸಿ ಕೊಲ್ಲುವರು 

ಉಗ್ರನರಸಿಂಹಗುಡುಗುತಿರುವನು 
ಉಗ್ರರ ಗಂಡೆದೆ ಸೀಳಲು
ಬಲು ಎಚ್ಚರ ಉಗ್ರರೆ 

ನೆಲಜಲವಾಯುದಾಳಿಗೆಓಡದಿರಿ 
ದಶದಿಕ್ಕುಗಳಿಂದಮುತ್ತುವರು
ನಿಮ್ಮನ್ನು ಹರಿದು ತಿನ್ನುವರು

ಮುನ್ನುಗ್ಗಿರಿನನ್ನವೀರಯೋಧರೇ
ಮೋದೀಜಿಯ ಬೆಂಬಲವಿದೆ
ಯುದ್ಧದಲ್ಲಿಗೆಲುವುನಮ್ಮದೇ 

 ರಚನೆ: ಅನ್ನಪೂರ್ಣ ಸು ಸಕ್ರೋಜಿ ಪುಣೆ