ನನ್ನವಳು


ಕನಸು ಕಟ್ಟಿದವಳು
ಮನಸ್ಸು ಬಿಚ್ಚಿದವಳು
ಮೌನದಲಿ ಮನದೊಳಗೆ
 ಮನೆಮಾಡಿದವಳು
ಆಕೆ ನನ್ನವಳು

ಕೂಸಾಗಿ ನನ್ನೊಡನೆ
ಕದನವನೆ ಗೈದವಳು
ಕೂಸನ್ನೆ ಕೈಗಿತ್ತು
ನೆನಪಿನಲಿ ನಕ್ಕವಳು
ಆಕೆ ನನ್ನವಳು

ಒಮ್ಮೊಮ್ಮೆ ಮಿಂಚಂತೆ
ಇನ್ನೊಮ್ಮೆ ಗುಡುಗಂತೆ
ಕೊನೆಗೂ ಬರಿ ಮಳೆಯಾಗಿ
ಹೂವಾಗಿ ಸುರಿವವಳು
ಆಕೆ ನನ್ನವಳು

ಅವಳಿಲ್ಲದೆ ಉಸಿರಿಲ್ಲ
ಉಸಿರಿಲ್ಲದೆ ಹಸಿರಿಲ್ಲ
ಉಸಿರು ಕಟ್ಟುವ ಗಳಿಗೆ
ಜೀವ ಗಂಗೆಯಾದವಳು
ಆಕೆ ನನ್ನವಳು

ರಚನೆ: ಉಮೇಶ ಮುಂಡಳ್ಳಿ ಭಟ್ಕಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ