ಭೂತಾಯಿ ತನಗ


ಭೂತಾಯಿಗೆ ನಮನ
ಚೆಂದ ನಿಸರ್ಗ ತಾಣ
ನದಿ ಗಿರಿ ಸಾಗರ
ಸಕಲ ಜೀವಾಧಾರ...

ಮಳೆ ನಂಬಿ ಉಳಿದು
ನೋವನೆಲ್ಲ ಸಹಿಸಿ
ಜಗವ ಸಲಹುವ
ಭೂತಾಯಿಗೆ ಶರಣು...

ಬೀಜ ಬಿತ್ತಲು ಸಾಕು
ರಾಶಿ ಫಲ ನೀಡುವ
ಖಗಮೃಗ ಆವಾಸ
ಭೂಒಡಲೇ ನಿವಾಸ...

ಅನ್ನದಾತ ರೈತರ
ಹೆತ್ತ ತಾಯಿ ಇವಳು
ಎಲ್ಲಾ ಸಹ್ಸಿ ಪೊರೆವ
ಜಗವ ಹೊತ್ತವಳು...

ಕ್ಷಮಿಸಿ ಬಿಡು ತಾಯಿ
ಹಾಳು ಮಾಡುವ ನಮ್ಮ
ಉಳಿಸಿಕೊಳ್ಳುವೆವು
ಹಾಳುಗೆಡದೆ ನಿನ್ನ...

ಅಪ್ಪಾಜಿ ಎ ಮುಸ್ಟೂರು ಅಮು ಭಾವಜೀವಿ ಮುಸ್ಟೂರು ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ 

1 ಕಾಮೆಂಟ್‌: