ಓಂ ಚಂಡಿಕಾ ಸೇವಾ ಟ್ರಸ್ಟ್ನಿಂದ ೩ ದಿನಗಳ ಉಚಿತ ಧ್ಯಾನ ಶಿಬಿರ


ದಾವಣಗೆರೆ: ಎ2. ಶ್ರೀ ಚಂಡಿಕಾಶ್ರಮದ ಓಂ ಚಂಡಿಕಾ ಸೇವಾ ಟ್ರಸ್ಟ್ನಿಂದ ಮೇ ೩ ರಿಂದ ೫ ರವರೆಗೆ ಬೆಳಿಗ್ಗೆ ೭ ರಿಂದ ೮ ರವರೆಗೆ ಸಾರ್ವಜನಿಕರಿಗೆ ೩ ದಿನಗಳ ಕಾಲ ಉಚಿತ ಧ್ಯಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ನ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಮಹಾವತಾರ ಬಾಬಾಜಿ ಅವರ ಮಾರ್ಗದರ್ಶನದೊಂದಿಗೆ ಟ್ರಸ್ಟ್ನ ಅಧ್ಯಕ್ಷರಾದ ಅಘೋರಿ ಚಿದಂಬರ ಯೋಗಿಯವರಿಂದ ನಡೆಯುವ ಈ ಅಪರೂಪದ ದೈಹಿಕ, ಮಾನಸಿಕವಾಗಿ ಖಿನ್ನತೆ ಮನಸ್ಸುಗಳನ್ನು ಪುಳಕಿತಗೊಳಿಸುವ ಧ್ಯಾನ ಶಿಬಿರದಲ್ಲಿ ಮನಸ್ಸಿನ ಶಾಂತಿ ಮತ್ತು ಸ್ಪಷ್ಟತೆಯ ಧ್ಯಾನ ಮಾರ್ಗದರ್ಶನ, ಮನೋಶಾಂತಿ ಮತ್ತು ಆತಂಕ ನಿವಾರಣೆ ತಂತ್ರಗಳು, ಕಾಸ್ಮಿಕ್ ಹೀಲಿಂಗ್ ಥೆರಪಿ ಮೂಲಕ ಅಂತರಿಕ ಶಕ್ತಿಯನ್ನು ಜಾಗೃತಿಗೊಳಿಸುವ ಈ ಶಿಬಿರದಲ್ಲಿ ಭಾಗವಹಿಸಲು ೯೩೮೦೩೮೯೨೩೬ ಈ ಸನೀಹವಾಣಿಗೆ ಸಂಪರ್ಕಿಸಲು ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಎನ್.ಕೌಶಲ್ಯಬಾಯಿ ವಿನಂತಿಸಿದ್ದಾರೆ. ಸಾರ್ವಜನಿಕರ ಮನಸ್ಸುಗಳನ್ನು ಜಾಗೃತಗೊಳಿಸುವ ಆತ್ಮವನ್ನು ಸ್ವಸ್ಥಗೊಳಿಸುವ ಸದುದ್ದೇಶದ ಈ ಶಿಬಿರ ದಾವಣಗೆರೆಯ ಚಂಡಿಕಾಶ್ರಮ ಎಂ.ಸಿ.ಸಿ. ‘ಬಿ’ ಬ್ಲಾಕ್, ೮ನೇ ಮುಖ್ಯ ರಸ್ತೆ, ೫ನೇ ತಿರುವು ಈ ಸಭಾಂಗಣದಲ್ಲಿ ಜತೆಗೆ ಅನ್‌ಲೈನ್ ಮತ್ತು ಆಫ್‌ಲೈನ್‌ನಲ್ಲೂ ನಡೆಯುತ್ತದೆ ಎಂದು ಟ್ರಸ್ಟ್ನ ಸಮಿತಿಯವರು ಪ್ರಕಟಿಸಿದ್ದಾರೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ