ಕವನಗಳ ಗುಚ್ಛ
ಸೂರ್ಯನ ಹೊಳಪುಳ್ಳವಳು ನೀನು!
ನಿನ್ನ ಮೊಗದ ಹೊಳಪಿಗೆ ನಾನು!
ಕಡಲಲ್ಲಿರುವ ಅಲೆಗಳು ನೀನು!
ನಿನ್ನ ನಗುವಿನ ಸೊಬಗಿಗೆ ಬಿದ್ದವನು ನಾನು!
ಕೋಗಿಲೆಯಂಥ ಧ್ವನಿವುಳ್ಳವಳು ನೀನು! ನಿನ್ನ ಕಂಠಕ್ಕೆ ಬೆರಗಾದವನು ನಾನು!!
ಮುಗಿಲಲ್ಲಿ ಹೊಳೆವ ನಕ್ಷತ್ರದಂತೆ ನೀನು!
ನಿನ್ನ ಅಂದವನ್ನು ನೋಡಿ ಮೋಹಿತನಾದೆ ನಾನು!!
ಮೇಘದಿಂದ ಬರುವ ಸೋನೆಮಳೆಯಂತೆ ನೀನು!
ನಿನ್ನ ಆಗಮನಕ್ಕಾಗಿ ಕಾದಿರುವ ಧರೆಯಂತೆ ನಾನು!!
ಅಂಧಕಾರದಲ್ಲಿ ಜೊತೆ ಬರುವ ನೆರಳಿನಂತೆ ನೀನು! ಜ್ಞಾನದ ದೀಪದೆಡೆಗೆ ಕರೆದೊಯ್ಯಲು ಹಂಬಲಿಸಿರುವೆ ನಾನು!!
ಬಾನಲ್ಲಿರುವ ಶಶಿಯಂತೆ ನೀನು!
ನಿನ್ನ ಸ್ವರ್ಶಿಸಲು ಬರುವ ಅಲೆಯಂತೆ ನಾನು!!!
ಕರಗಿತು ಮೌನ! ನೆನೆದವು ನಯನ!
ತೊದಲಿತು ಮಾತು! ನಿನ್ನ ಕಂಡ ಕೂಡಲೇ!!
ಹೃದಯ ತುಂಬಿತ್ತು! ಮನಸ್ಸು ಕುಣಿಯಿತು!ಮುಖದಲ್ಲಿ ನಗು ಬೀರಿತು!
ನಿನ್ನ ಕಂಡ ಕೂಡಲೇ ಮೌನ ಮಾಯವಾಯಿತು!!
ಸೂರ್ಯ ಮರೆಯಾದ! ಮೋಡ ಮುಸುಕಿದವು! ವರ್ಷ ಸುರಿಯಿತು!
ನಿನ್ನ ಕಂಡ ಕೂಡಲೇ ಮೌನ ಮಾಯವಾಯಿತು!!
ಚಂದ್ರ ನಾಚಿದ! ಅಲೆ ಅಪ್ಪಳಿಸಿದವು!
ನಕ್ಷತ್ರ ಮಿನುಗಿದವು! ನಿನ್ನ ಕಂಡ ಕೂಡಲೇ ಮೌನ ಮಾಯವಾಯಿತು!!
ಕಾಗದದಲ್ಲೇ ದುಂಬಿಯನ್ನು ಕರೆಸಿ!
ಮಕರಂದವನ್ನು ಸವಿಸುವ ಇವನು!!
ರೆಕ್ಕೆಯಿಲ್ಲದ ಹಕ್ಕಿಯನ್ನು!
ತನ್ನ ನುಡಿಯಲ್ಲಿ ಹಾರಿಸುವವ ಇವನು!!
ಮೌನಿಯನ್ನು ಪದಗಳಲ್ಲಿ!
ಮಾತನಾಡಿಸುವವ ಇವನು!!
ವಿಜ್ಞಾನಿ ಕಾಣದ್ದನ್ನು ಸುಜ್ಞಾನಿ!
ಕಂಡವವ ಇವನು!!
ಯಾರಿವನು? ಯಾರಿವನು?
ಕವಿ ಇವನು ಶಾರದೆಯ ಮಗನೂ
ಇವನು!!
ರವಿ ಕಾಣದ್ದನ್ನು ಕವಿ !
..ಕಂಡವನು ಇವನು!!!!
ಕಥೆಯೊಂದನ್ನು ಹೇಳಬೇಕೆಂದಿದೆ ಮನ!
ಹುಡುಕುತಿಹೆ ಪದಗಳ ಅದನ್ನ ಬಿತ್ತರಿಸಿಸಲು ಈ ಕವನ! ಸೂತಪುತ್ರ ನೆಂದರೆ ಇವನಿಗೆ ಪ್ರಾಣ! ಅವನಂತೆ ಇವನಿಗೂ ನೋವುಗಳೇ ನೆಚ್ಚಿನ ತಾಣ!
ಪ್ರತಿ ಹೆಜ್ಜೆಯಲ್ಲೂ ಇವನಿಗೆ ಅನುಮಾನ! ಬಿಡುತ್ತಿಲ್ಲ ಆದರೂ ಗುರಿಯೇಡಿನ ಯಾನ! ಅವಳ ಜೊತೆ ನಡೆಯುತ್ತಿದೆ ಸಂತೋಷದ ಪಯಣ!!