ಲೇಖನ: ಜ್ಞಾನ ದಾಸೋಹಿಗಳಲ್ಲಿ ಸೃಜನಶೀಲ ಜ್ಞಾನಿ ಡಾll ಪ್ರಕಾಶ ಭೋಜೆಯವರು ಕೂಲಿ ಕಾರ್ಯಕ್ರಮಿಕರಿಗೆ ಉಚಿತವಾಗಿ ಪಾಠ ಮಾಡಿದ ಮಹಾನ್ ವ್ಯಕ್ತಿ.

ಈ ಭೂಮಿ ಮೇಲೆ ಜನಿಸಿ ಬಂದನಂತರ ಅವನಿಗೆ ಅವನದ್ದೇ ಆದ ಅನೇಕ ಆಸೆಗಳು ಇರುತ್ತವೆ. ನಾನು ಹಣವನ್ನು ಗಳಿಸಬೇಕು, ದೊಡ್ಡ ರಾಜಕೀಯ 
ವ್ಯಕ್ತಿ ಆಗಬೇಕು  ದೊಡ್ಡ ದೊಡ್ಡ ಮನೆಗಳನ್ನು 
ಕಟ್ಟ ಬೇಕು ಹಾಗೂ ದೊಡ್ಡ ಆಫೀಸರ್ ಆಗಬೇಕು, 
ಇನ್ನೂ ಅನೇಕ ಆಸೆಗಳು ಮನುಷ್ಯನಾದವನಿಗೆ ಹುಟ್ಟುವುದು ಸಹಜವಾಗಿರುತ್ತದೆ. ಇಲ್ಲಿ ಯಾವುದಕ್ಕೂ ಆಸೆ ಪಡದೆ ಕೇವಲ ಬಡತನದಲ್ಲಿ ಹುಟ್ಟಿ ಶಿಕ್ಷಕರಾಗಿ 
ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳಸಿ ಕೊಳ್ಳುವುದರ ಜೊತೆ- ಜೊತೆಗೆ ಅನೇಕ ಸಾಮಾಜಿಕ ಧಾರ್ಮಿಕ 
ಸೇವೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಸಾಹಿತ್ಯಕ್ಕೆ ಸಂಬಂಧಿಸಿದ 88 ಕೃತಿಗಳನ್ನು
ರಚನೆ  ಮಾಡಿದ ಶ್ರೇಷ್ಠ ಸಾಹಿತಿ ಪ್ರಕಾಶ್ ಭೋಜೆ.
ಇವರು ಬಡ ಮಕ್ಕಳಿಗೆ ಹಾಗೂ ವಲಸೆ ಬಂದ ಬಡ ಕುಟುಂಬ ಮಕ್ಕಳಿಗೆ ಉಚಿತವಾಗಿ ಪಾಠವನ್ನು ಭೋದನೆ ಮಾಡಿ ಶಿಕ್ಷಣ ಸಾಹಿತ್ಯದಲ್ಲಿ ಸೃಜನಶೀಲ ಮತ್ತು ನಿಷ್ಠಾವಂತ ವ್ಯಕ್ತಿಯಾಗಿ ಹಾಗೂ ಜ್ಞಾನ ದಾಸೋಹಿಯಾಗಿ ಅನೇಕ ಪ್ರಶಸ್ತಿಪುರಸ್ಕೃತರಾದ ಬೆಳಗಾವಿ ಜಿಲ್ಲೆಯ ಡಾ!! ಪ್ರಕಾಶ 
ಎಂ. ಭೋಜೆಯವರ ತಂದೆಯ 
ಹೆಸರು: ಮಲ್ಲಪ್ಪ, ತಾಯಿ: ಲಕ್ಷ್ಮೀಬಾಯಿ. 
ಈ ದಂಪತಿಗಳಿಗೆ ೧ ಜೂನ್ ೧೯೫೨ ರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಎಂಬ ಊರಲ್ಲಿ ಜನಿಸಿದರು. ಇವರು ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ತಮ್ಮ ಊರಿನಲ್ಲಿ ಮುಗಿಸಿಕೊಂಡು, ಅನಂತರದ ಪದವಿಯನ್ನು ಜಿ. ಆಯ್ ಬಾಗೇವಾಡಿ ಕಾಲೇಜಿನಲ್ಲಿ ಮುಗಿಸಿದ ನಂತರ ಸದಲಗಾ ಪ್ರೌಢ ಶಾಲೆಯಲ್ಲಿ ಗ್ರಂಥಪಾಲಕರಾಗಿ ೧೦ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ ಬಳಿಕ ಬಿ. ಎಡ್. ಪದವಿಯನ್ನು ಬಳ್ಳಾರಿಯಲ್ಲಿ ಮುಗಿಸಿಕೊಂಡು. ಎಂ. ಎ. ಮತ್ತು ಎಮ್. ಎಡ್.  ಪದವಿಗಳನ್ನು ಕೊಲ್ಹಾಪೂರ ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡು ಇವರು ತಮ್ಮ ಶಿಕ್ಷಣದ ಜೊತೆಗೆ ಸಿನಿಮಾ ಮಂದಿರದಲ್ಲಿ ಟೀಕೆಟ್ ಕಲೆಕ್ಟರಾಗಿ ಕೆಲಸವನ್ನು ನಿರ್ವಹಿಸಿದರು. ಇದಾದನಂತರ ಪ್ರಿಂಟಿಂಗ್ ಪ್ರೆಸ್ ನಲ್ಲಿ 'ಬುಕ್ ಬೈಂಡಿಂಗ್ ' ಮಾಡುವ ಕೆಲಸವನ್ನು ಮಾಡಿದರು.
ಇದರ ಜೊತೆಗೆ ಅನೇಕ ದಿನಗಳಕಾಲ ತಮ್ಮ ಬಾಲ್ಯದ ದಿನಗಳನ್ನು ಕಳೆದರು. ಪ್ರಕಾಶ ಭೋಜೆರವರು ೨೫ ವರ್ಷಗಳಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕನ್ನಡವೇ ನನ್ನ ಉಸಿರೆಂದು ಸಾಹಿತ್ಯ ಸೇವೆಗೆ ಸಿದ್ದರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಅದಾದನಂತರ ಸಾಕ್ಷರತಾ ಅಂದೋಲನದಲ್ಲಿ ೩ ವರ್ಷ ಕೆಲಸವನ್ನು ಮಾಡಿದರು. ಅಷ್ಟೇ ಅಲ್ಲದೆ ಸಂಪನ್ಮೂಲ ವ್ಯಕ್ತಿಯಾಗಿ ಗಣತಿ ಕಾರ್ಯ ಮಾಡಿದ ಇವರು :ಶೈಕ್ಷಣಿಕವಾಗಿ ಸಾಕ್ಷರತಾ ಅಂಧೋಲನ' 'ನವ ಸಾಕ್ಷರ ಮೌಲ್ಯಮಾಪನ' ಶೈಕ್ಷಣಿಕ ಲೇಖನಗಳ ಬರಹ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ
ಐತಿಹಾಸಿಕ ಸ್ಥಳಗಳ ಪರಿಚಯ 'ಚಿಣ್ಣರ ಅಂಗಳ' 'ಸಮುದಾಯದತ್ತ' 'ಶಾಲೆ ಮರಳಿ ಬಾ ಶಾಲೆಗೆ' ಹೀಗೆ ಹತ್ತು ಹಲವಾರು ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ಗಡಿನಾಡಿನ ಭಾಗದಲ್ಲಿ ಇರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾದರು. ಹೀಗೆ ಹಲವಾರು ತರಬೇತಿಗಳನ್ನು ಪಡೆದು ಕೊಂಡು ಶಿಕ್ಷಕರಿಗೆ ಮಕ್ಕಳಿಗೆ ಮಾರ್ಗದರ್ಶಕರಾಗಿ ಶಿಕ್ಷಣಕ್ಕಾಗಿ ಹಗಲಿರುಳು ಶ್ರಮಿಸಿ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾದರು. 

ಇನ್ನೂ ಹಲವಾರು ವಿದ್ಯಾರ್ಹತೆಗಳೊಂದಿಗೆ ವಿಶೇಷ ಚಟುವಟಿಕೆಗಳೊಂದಿಗೆ ಉತ್ತಮ ಸಮಾಜ ನಿರ್ಮಾಣ
ಮಾಡುವುದರಲ್ಲಿ ಹಾಗೂ ಸಾಮಾಜಿಕ ಕಳಕಳಿ ಹೊಂದಿ ಗಡಿ ಭಾಗದಲ್ಲಿ ಕಂಪು ಬೀರಲು ಹಲವಾರು ಸಾಹಿತಿಕ ಕಾರ್ಯಗಳನ್ನು ಹಮ್ಮಿಕೊಂಡು ಕನ್ನಡ ನಾಡು-ನುಡಿ ಸೇವೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟರು. ಇವರು ಮಹತ್ವದ ಪೈಗಂಬರ ಮತ್ತು ಶಿಕ್ಷಣ ಕಬ್ಬು ವ್ಯಥೆ ಮತ್ತು ಕಥೆ ತಾಯಿ, ಪರಿವರ್ತಕ ಹೀಗೆ ಇನ್ನೂ ಅನೇಕ ಸಾಹಿತ್ಯಕ್ಕೆ ಸಂಬಂಧಿಸಿದ ೭0 ಕ್ಕೂ ಹೆಚ್ಚು ಕೃತಿಗಳನ್ನು ರಚನೆ ಮಾಡಿದ್ದಾರೆ. ಇವರು ಬೆಳಗಾವಿ ಜಿಲ್ಲೆಯಲ್ಲಿ ಒಬ್ಬ ನಿಷ್ಠಾವಂತ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ ಹಾಗೂ ಇವರು ನಾಟಕ ಕಲಾವಿದರು ಕೂಡ ಹೌದು. ಬೋಜೆರವರು 'ಅರಣ್ಯ ರಕ್ಷಣೆ' ನಾಟಕದಲ್ಲಿ 'ಪೋಲಿಸ್ ಅಧಿಕಾರಿ' ಪಾತ್ರ ವಹಿಸಿ ನಾಟಕಕ್ಕೆ ಒಂದು ಕೀರ್ತಿ ತಂದವರು.
ಭೋಜೆಯವರು ಶಿಕ್ಷಣ, ಸಾಹಿತ್ಯ, ನಾಟಕ, ಅನೇಕ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು  
ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಪಲ್ಲಕ್ಕಗಳನ್ನು ನೀಡುವುದಲ್ಲದೇ ಗೌರವಿಸಿ ಸನ್ಮಾನಿಸಿದ್ದಾರೆ. 

ಶೈಕ್ಷಣಿಕ ವಲಯದಲ್ಲಿತಾಲೂಕಾ ಆದರ್ಶ ಶಿಕ್ಷಕ ಪ್ರಶಸ್ತಿ, ಜಿಲ್ಲಾ ಆದರ್ಶ ಶಿಕ್ಷಣ ಪ್ರಶಸ್ತಿ, ಸರ್. ಎಮ್. ವಿಶ್ವೇಶ್ವರಯ್ಯ ಪ್ರಶಸ್ತಿ, ಡಾ!! ಸರ್ವೆಪಲ್ಲಿ ರಾಧಾಕೃಷ್ಣನ್ ಪ್ರಶಸ್ತಿ, ಕರ್ನಾಟಕ ಸಮಯರತ್ನ ಪ್ರಶಸ್ತಿ, ಹೀಗೆ ಇನ್ನೂ ಹಲವಾರು ಪ್ರಶಸ್ತಿಗಳು ಇವರಿಗೆ ದೊರಕಿದವು. ನಿಜ ಸಂಗತಿ ಡಾ!! ಪ್ರಕಾಶ ಭೋಜೆಯವರು ಸುಮಾರು 
೩೦ ವರ್ಷಗಳಕಾಲ ಸೇವೆ ಮಾಡಿಕೊಂಡು ಬಂದಿರುವುದೊಂದು ನಮಗೆ ಸಂತೋಷದ ವಿಚಾರ
ಹೀಗೆ ಇವರ ಸಾಧನೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಮುಂದುವರಿಯಲಿ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಸೇವೆ ಹೀಗೆಯೇ ಸಾಗುತ್ತಿರಲಿ ಎಂದು
ಕನ್ನಡಾಂಬೆ ಬಳಿ ಕೈಮುಗಿದು ಬೇಡುತ್ತಾ ಮತ್ತೊಮ್ಮೆ 
ಕನ್ನಡ ಜನತೆಯ ಸಂಘಟನೆಯ ಪರವಾಗಿ ಕನ್ನಡಾಂಬೆ ಹತ್ತಿರ ಹೃದಯಾಂತರಾಳದಿಂದ ಕೇಳಿಕೊಳ್ಳುತ್ತಾ 
ಶುಭ ಹಾರೈಕೆ ಯೊಂದಿಗೆ ವಿರಮಿಸುತ್ತೇವೆ.
         
                      ರಚನೆ
        ಬಿ. ಎಸ್. ಬಾಗೇವಾಡಿಮಠ.
       ರಾಣೇಬೆನ್ನೂರು. ಜಿ: ಹಾವೇರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ