ಕೊಡಗು: ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಬಲ್ಲಮಾವಟಿ ಗ್ರಾಮದವರಾದ ಸಾಹಿತಿ, ಕವಿ, ಪರಿಸರ ಪ್ರೇಮಿ, ವನ್ಯಜೀವಿ ಸಂರಕ್ಷಣಾ ಸೇವಕ ಮತ್ತು ಗಸ್ತು ಅರಣ್ಯ ಪಾಲಕ ಎಂ. ಡಿ. ಅಯ್ಯಪ್ಪ ಅವರು “ಸರಸ್ವತಿ ಸಾಧಕಸಿರಿ” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಂ. ಡಿ. ಅಯ್ಯಪ್ಪರವರು ಮೂಲತಃ ಬಲ್ಲಮಾವಟಿ ಗ್ರಾಮದವರು. ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತಮ್ಮ ಊರಿನಲ್ಲಿಯೇ ಮುಗಿಸಿ ನಂತರ ಕಾಲೇಜು ಶಿಕ್ಷಣವನ್ನು ಗೋಣಿಕೊಪ್ಪಲು ಊರಿನ ಕಾವೇರಿ ಕಾಲೇಜಿನಲ್ಲಿ ಮುಗಿಸಿದರು, ಅಯ್ಯಪ್ಪರವರು ತಮ್ಮ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಕವನ, ಕಥೆ, ಲೇಖನಗಳನ್ನು ಬರೆಯುತ್ತಿದ್ದರು.ಪರಿಸರ, ವನ್ಯಜೀವಿ, ಪಕ್ಷಿಧಾಮ, ನಾಡು, ನುಡಿ ಕುರಿತು ಕವನ, ,ಸಂಕಲನ,ಲೇಖನ, ಕೃತಿಗಳ ರಚನೆ ಮತ್ತು ಗಾಯನ ಮುಂತಾದವುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನೂ ನಾನಾ ತರಹ ಬರಹಗಳನ್ನು ಬರೆಯುವುದಲ್ಲದೆ ಹಾಡನ್ನು ಹಾಡುವುದನ್ನು ಕಲಿತಿದ್ದಾರೆ. ‘ನಿಸರ್ಗ ಸ್ವರ್ಗ, ಕಾವ್ಯ ನಿನಾದ, ಕರ್ನಾಟಕದ ಪಕ್ಷಿಧಾಮಗಳು, ಹೃದಯ ರಾಗ, ಭಾರತದ ರಾಷ್ಟ್ರೀಯ ಉದ್ಯಾನವನಗಳು,
ಇನ್ನೂ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಕೃತಿಗಳನ್ನು
ಬರೆದಿದ್ದಾರೆ. ಇವರು ಜಿಲ್ಲಾದ್ಯಾಂತ ನಡೆಯುವ ಸಾಂಸ್ಕೃತಿಕ ಸಮಾರಂಭಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ್ದಾರೆ.
ಪರಿಸರ, ವನ್ಯಜೀವಿ ಸಂರಕ್ಷಣಾ ಸೇವೆ,
ಕಾಡಂಚಿನ ಗಿರಿಜನರ ಪುನರ್ವಸತಿ ಪ್ರದೇಶದಲ್ಲಿ ಕಾರ್ಯನಿರ್ವಹಿಸಿರುವುದು.
ರ್ಯಾಲಿ ಇಂಟರ್ನ್ಯಾಷನಲ್ ಇಂಡಿಯಾ ಎಂಬ ಅಂತರರಾಷ್ಟ್ರೀಯ ಪರಿಸರ ಶಿಬಿರಾರ್ಥಿಗಳೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ. ಅರಣ್ಯ, ಪರಿಸರ, ವನ್ಯಜೀವಿ, ಸಂಭಂದಿಸಿದಂತೆ ಶಾಲಾ ಕಾಲೇಜು ಹಾಗೂ ಸಾರ್ವಜನಿಕ ವಲಯಗಳಲ್ಲಿ ಹೋಗಿ ಬೀದಿನಾಟಕ, ಪ್ರಬಂಧ ,ಭಾಷಣ, ಜಾಗೃತಿ ಗೀತೆಗಳ ಮೂಲಕ ಅರಿವು ಮೂಡಿಸಿದ್ದಾರೆ ಮತ್ತು ಹಾಡನ್ನು ಹಾಡಲು ಕಲಿತಿದ್ದಾರೆ.
ಅಯ್ಯಪ್ಪ ರವರ ಕಲೆ, ಸಾಹಿತ್ಯ, ಶಿಕ್ಷಣ, ರಂಗಭೂಮಿ, ಸಾಂಸ್ಕೃತಿ ಇನ್ನೂ ಅನೇಕ ಸಾಧನೆಗಳಿಗೆ ಸಂಘಟನೆಗಳಿಂದ ‘ಕಾವ್ಯಶ್ರೀ, ಕಾವ್ಯಗನ್ನಡಿ, ದಸರಾ ಕಾವ್ಯ, ಕನ್ನಡ ರಾಜ್ಯೋತ್ಸವ, ಬಿ. ಮಾರಪ್ಪ, ವಿಶ್ವ ಮಾನ್ಯ ಕನ್ನಡಿಗ, ಮುಖ್ಯಮಂತ್ರಿ ಪದಕ, ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪ, ಕುವೆಂಪು ಕಾವ್ಯ ಚೇತನ, ವಿವಿಧ ಜಿಲ್ಲಾ ಮತ್ತು ರಾಜ್ಯಪ್ರಶಸ್ತಿಗಳು ದೊರಕಿವೆ.
ಇವರ ಸಮಾಜ ಸೇವೆಯನ್ನು ಗಣನೀಯವಾಗಿ ಗುರುತಿಸಿ ಎಂ. ಡಿ. ಅಯ್ಯಪ್ಪ ಅವರಿಗೆ 70ನೇ ವರ್ಷದ ಕನ್ನಡ ನಿತ್ಯೋತ್ಸವದ ಅಂಗವಾಗಿ, ಏಪ್ರಿಲ್ 27, 2025 ರಂದು ದಾವಣಗೆರೆ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ “ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ” ರವರು ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ “ಸರಸ್ವತಿ ಸಾಧಕಸಿರಿ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ ಶೆಣೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ