ಅಮ್ಮನ ಮಡಿಲೇ ಸ್ವರ್ಗ

ಅಮ್ಮನ ಮಡಿಲೇ ಸ್ವರ್ಗ

ಅಮ್ಮನ ಮಡಿಲು ಸ್ವರ್ಗಕ್ಕೂ ಮಿಗಿಲು
ಎನಗೆ ಬಹು ಖುಷಿ ಹೆತ್ತವರು ನಗುತಿರಲು
ಎಲ್ಲಿಲ್ಲದ ಸಂತೋಷ ಗೆಳೆಯ ಬರುತಿರಲು
ಕಾಯುವೆ ಅಮ್ಮ ನಂಗೆ ಏನಾದರೂ ತರಲು

ಬೆಲೆ ಕಟ್ಟಲಾಗದು ತಾಯಿಯ ತ್ಯಾಗದಲ್ಲಿ
ಋಣ ತೀರಿಸಲಾಗದು ಮಾತೆಯ ಪ್ರೀತಿಯಲ್ಲಿ
ಮುಕ್ತಿ ಹೊಂದಬೇಕು ಹಡೆದವರ ಸೇವೆಯಲ್ಲಿ
ಮುಕ್ಕೋಟಿ ದೇವರು ಅಮ್ಮನ ಪಾದದಡಿಯಲ್ಲಿ

ನವ ಮಾಸ ಹೊಟ್ಟೆಯಲ್ಲಿ ಇಟ್ಕೊಂಡಿರ್ತಾಳೆ
ನಾವು ದೊಡ್ಡವರಾಗೋತನಕ ಸಾಕಿರ್ತಾಳೆ
ನಮ್ಮ ಹೊಟ್ಟೆಗಾಗಿ ಬೆವರನಿ ಸುರಿಸಿರ್ತಾಳೆ
ಕುಟುಂಬಕ್ಕಾಗಿ ಜೀವನ ಮೂಡುಪಾಗಿಟ್ಟಿರ್ತಾಳೆ

ನಮ್ಮ ಉಸಿರಿರೋತನಕ ಸೇವೆ ಮಾಡೋಣ
ಹೆತ್ತವರಿರೋತನಕ ಜೋಪಾನ ಮಾಡೋಣ
ಎಲ್ಲರನ್ನು ನಗಿಸುತ್ತಾ ನಲಿಯುತ್ತಾ ಸಾಗೋಣ
ಹಡೆದವರನ್ನ ಆರಾಧಿಸಿ ಮುಕ್ತಿ ಹೊಂದೋಣ…

ರಾಘವೇಂದ್ರ ಎಚ್ ಹಳ್ಳಿ ಕೊಪ್ಪಳ.

               ಪ್ರೇಮ



ಪ್ರೇಮವೆಂದರೆ'''''''''
ಕ್ಯಾಲೆಂಡರಿನೊಂದಿಗೆ  
ದಿನಾಂಕ ಗುರುತಿಸಿ
ಗುಲಾಬಿ ಹೂ ಕಿತ್ತು
ಮಂಡಿಯೂರಿ ಕೇಳಿಕೊಳ್ಳುವ,
ಬೇಡಿಕೊಳ್ಳುವ
ನಿವೇದನೆಯಲ್ಲ !
ಎಲ್ಲ ಕಾಲಕೂ 
ಮಿಡಿದು ತುಡಿಯುವ ಸ್ವಚಂದ 
ಕಂಗೊಳಿಸುವ ನಿನ್ನಯ
 *ನಿರ್ಮಲ ಭಾವ* !

ಪ್ರೇಮವೆಂದರೆ'''''''''
ಅರ್ಧರಾತ್ರಿಯಲಿ 
ನಶೆ ಬೀಜ ತುಂಬಿಕೊಂಡು ನಿರ್ಮಲವೆಂಬ
ಸಭ್ಯತೆಯ ಗೆರೆ ದಾಟಿ ಹದ್ದು ಮೀರಿ
ಕುಣಿಯುವುದಲ್ಲ !
ತಂತಾನೇ ಸೃಜಿಸಿ
ಕಂಗಳೊಳಗೆ 
ಸರಿದಾಡುವ,ಸರಿದೂಗುವ ನಿನ್ನ
*ಅಭಿವ್ಯಕ್ತವಾದ ಭಾಷೆ* !

ಪ್ರೇಮವೆಂದರೆ'''''''''
ನಿಗದಿಯಾದ ಬೆಲೆಗೆ
ತಕ್ಕಷ್ಟು ತೂಗುವ
ಸಂತೆಯೊಳಗಣ ವಸ್ತುವೆಂಬಂತೆ ಭಾವಿಸುವ 
ಸಾಮಗ್ರಿಯಲ್ಲ !
ಫಲ ನಿರೀಕ್ಷಿಸದೆಯೆe
ಬಲವಾಗೊಳ್ಳುವ ನಿನ್ನಯ
 *ನಿರಾಕಾಂಕ್ಷ ನಿರಪೇಕ್ಷ ಕ್ರಿಯೆ* 

  *ರಾಘವೇಂದ್ರ ಎಚ್,ಹಳ್ಳಿ ಕೊಪ್ಪಳ.

ಹೂವಿನ ಬಗ್ಗೆ ಕವನ!!, ಹೊಂಗೆಯ ತಂಪು ನೀನು!ಜಾಜಿಯ ಕಂಪು ನಾನು!ಸೇವಂತಿಯ ಸೊಂಪು ನೀನು!ಗುಲಾಬಿಯ ಕೆಂಪು ನಾನು!!ಮಂದಾರದ ಸೊಗಸು ನೀನು!ತಾವರೆಯ ಸೊಬಗು ನಾನು!ಮಲ್ಲಿಗೆಯ ಸುವಾಸನೆ ನೀನು!ಸಂಪಿಗೆಯ ಸುಗಂಧ ನಾನು!!ಪಾರಿಜಾತದ ಪರಿಮಳ ನೀನು!ಸೂರ್ಯಕಾಂತಿಯ ಸುರಿಮಳೆ ನಾನು! ಸುಗಂಧರಾಜದ ಮಕರಂದ ನೀನು! ಕನಕಾಂಬರದ ಅಂದ ಚೆಂದ ನಾನು!!ನನ್ನ ಕವನ!!ಮನಸ್ಸಿನ ಭಾರವನ್ನು ಇಳಿಸುವುದು ಈ ನನ್ನ ಕವನ! ಹೃದಯದ ಮಿಡಿತವನ್ನು ಅಳೆಯುವುದು ಈ ನನ್ನ ಕವನ! ಸಂತೋಷದ ನಿಮಿಷವೇ ಹುಟ್ಟುವುದು ಈ ನನ್ನ ಕವನ! ನೋವು ನಲಿವಿನ ನಡುವೆ ಮುದ ನೀಡುವುದು ಈ ನನ್ನ ಕವನ!!ಮನಸು ಮನಸುಗಳ ಒಂದಾಗಿಸುವುದು ಈ ನನ್ನ ಕವನ! ಭಾವನೆಗಳನ್ನು ರವಾನಿಸುತ್ತಾ ಬೆಳಸುವುದು ಈನನ್ನ ಕವನ! ಹೇಳಹೊರಟರೆ ತೀರದು ಈ ನನ್ನ ಕವನ!ಬೆಳೆಸುತಿರಲಿ ಭಾಂಧವ್ಯವನ್ನು ಈ ನನ್ನ ಕವನ!!ಹೃದಯದ ಮಾತು!!ಎನಗಂದು ಇರಲಿಲ್ಲ ಸಂತೋಷದ ಅಧ್ಯಾಯ! ಎನಗಿದೆ ಪ್ರಾಮಾಣಿಕತೆಯಿಂದ ಸಹೃದಯ! ದುಡಿದು ಜಯಿಸಬೇಕೆಂಬುದು ನನ್ನ ನ್ಯಾಯ! ದೂರಾಗಲು ಹೇಳಬೇಡ ಇಲ್ಲಸಲ್ಲದ ಉಪಾಯ!!ಇಂದು ಎನಗಿದೆ ಸುಂದರ ಮನಮೋಹಕ ಕಾಯ! ಕಾರು ಬಾರು, ಆಫೀಸು ಹಲವಾರು ಆದಾಯ! ನಿನ್ನ ಕಷ್ಟಕಾರ್ಪಣ್ಯಗಳು ಹೇಳಿಬಿಡು ವಿದಾಯ! . ಮನಸಾರೆ ಸೇರಿಬಿಡು ತೆರೆದಿಟ್ಟ ನನ್ನ ಹೃದಯ!! ಕೆ ಆರ್ ಸುಮತೀಂದ್ರ ಲೇಖಕರು