ಮದುವೆಯಲಿ ಹೆಣ್ಣಿಗೆ ಸಿಗುವ
ಸಮ್ಮಾನ ಸೌಭಾಗ್ಯವದು ತಾಳಿ/
ಪ್ರತಿಹೆಣ್ಣು ಬದುಕಿನಲಿ ಬಯಸುವ
ಅತಿಮೌಲಿಕ ವಸ್ತುವದು ತಾಳಿ/
ಸಂಸಾರವೆಂಬ ಹಸಿರ ಕನಸಿಗೆ
ಬಾಗಿಲು ತೆರೆದಿರಿಸುವದು ತಾಳಿ/
ಹೃದಯಗಳ ಬಂಧದ ಬೆಸುಗೆಗೆ
ಕೊಂಡಿ ಆಗುವದಿದು ತಾಳಿ/
ಸುಮಧುರ ಪ್ರೀತಿಯ ನಂಟಿಗೆ
ಶಾಶ್ವತ ಆಧಾರವದು ತಾಳಿ/
ಮಹಿಳೆಯ ಮಾನದ ರಕ್ಷಣೆಯ
ದ್ಯೋತಕ ಅಹುದಲ್ಲವೆ ತಾಳಿ/
ಸಂಪ್ರದಾಯದ ಸಂಕೇತ ಪತಿಯ
ಪ್ರೀತಿಗೆ ತಾಯ್ನಂಟು ತಾಳಿ/
ಬದುಕಿನ ಮಮತೆಯ ಕನಸುಗಳ
ಜೊತೆಯಾದ ಭರವಸೆಯೆ ತಾಳಿ/
ಎ. ಹರೀಶ ಡೋಂಗ್ರೆ, ಅಲ್ಲೆತ್ತಿಮಾರು,
ಮಾಳ (ವಾಸ ಬೆಂಗಳೂರು)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ