ಏಕೆ ಹೀಗೆ
*********
ನಿನ್ನೊಳಗೆ ನಗುವಿರದೆ
ನಿ ಚಡಪಡಿಸುತಿರಲು
ನಾ ನಗುವಿನಲಿ ಇದ್ದೆಂದು
ಹೇಗೆ ನಿ ತಿಳಿದೆ.
ನಿನ್ನ ಬಯಕೆಯದು
ನನಗೆ ಆದೇಶವು
ಹೇಳಿ ಬಿಡು ನನ್ನ ಸಖಿ
ಏನಾದರಾಗಲಿ
ಕ್ರೋದದಲಿ ನಿ ಸಿಲುಕಿ
ಹೊರಬರದೆ ಇದ್ದರೆ
ನನ್ನೊಳಗೂ ಜೀವಸೆಲೆ
ಬತ್ತುವುದಲ್ಲವೇ ಸಖಿ
ಇಂದು ನಿನ್ನೆಯದಲ್ಲ
ಜನ್ಮ ಜನ್ಮಾಂತರದ್ದು
ಮರೆತೆ ಎಂದು ಕ್ಷಣವಾದರೂ
ಹೇಗಂದುಕೊಂಡೆ ಸಖಿ
-ಉಮೇಶ ಮುಂಡಳ್ಳಿ ಭಟ್ಕಳ